ಚಿಕ್ಕಜಾಜೂರು: ಸಮೀಪದ ಕಡೂರು ವೀರಭದ್ರ ಸ್ವಾಮಿಯ ಕೆಂಡಾರ್ಚನೆ ಹಾಗೂ ಆನೆ ಉತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಮುಂಜಾನೆಯಿಂದ ಸ್ವಾಮಿಗೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಸ್ವಾಮಿಯನ್ನು ಸುಂದರವಾಗಿ ಅಲಂಕರಿಸಿದ ಸಣ್ಣ ರಥದಲ್ಲಿ (ಉಚ್ಚಾಯ) ಇರಿಸಲಾದ ಆನೆ ಮಾದರಿಯ ಮೇಲೆ ಕೂರಿಸಲಾಯಿತು, ನಂತರ ರಥಕ್ಕೆ ದೊಡ್ಡೆಡೆ ಸೇವೆಯನ್ನು ನಡೆಸಲಾಯಿತು. ಉಚ್ಚಾಯವನ್ನು ಭಕ್ತರು ಎಳೆದುಕೊಂಡು ಬೆಟ್ಟದ ತಪ್ಪಲಿನ ದುಗ್ಗಳ ಹೊಂಡದ ಬಳಿ ತಂದರು. ಅಲ್ಲಿ ಸ್ವಾಮಿಗೆ ಗಂಗಾ ಪೂಜೆ ಹಾಗೂ ದುಗ್ಗಳ ಪೂಜೆಯನ್ನು ನಡೆಸಲಾಯಿತು. ನಂತರ, ಉಚ್ಚಾಯವನ್ನು ಪುನಃ ದೇವಸ್ಥಾನದ ಬಳಿ ಕರೆ ತರಲಾಯಿತು.

ಕೆಂಡಾರ್ಚನೆ: ದುಗ್ಗಳ ಪೂಜೆಯಿಂದ ಹಿಂತಿರುಗಿದ ನಂತರ, ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ವೀರಗಾಸೆ ನೃತ್ಯ ಹಾಗೂ ವಾಧ್ಯ ಘೋಷ್ಠಿಗಳೊಂದಿಗೆ ಬೆಟ್ಟದ ಮೇಲಿರುವ ದೇವಾಲಯದ ಮುಂಭಾಗದಲ್ಲಿ ನಿರ್ಮಿಸಿರುವ ಅಗ್ನಿ ಕುಂಡದ ಬಳಿ ಕರೆ ತರಲಾಯಿತು. ದೇವಸ್ಥಾನದ ಅರ್ಚಕರು ಹಾಗೂ ಪುರೋಹಿತರು ಅಗ್ನಿಕುಂಡಕ್ಕೆ ವಿವಿಧ ಪೂಜೆಗಳನ್ನು ಸಲ್ಲಿಸಿದರು. ಮಹಾಂಗಳಾರತಿ ಮಾಡಿದ ನಂತರ ಪಲ್ಲಕ್ಕಿಯನ್ನು ಹೊತ್ತ ಭಕ್ತರು ಅಗ್ನಿಕುಂಡವನ್ನು ಪ್ರವೇಶಿಸಿದರು. ನೆರೆದಿದ್ದ ನೂರಾರು ಭಕ್ತರು ನೆಚ್ಚಿನ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.

ಹರಕೆ ತೀರಿಸಿದ ಭಕ್ತರು: ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದುಗ್ಗಳ ಸೇವೆ ಸಲ್ಲಿಸಿದರು. ಕೆಲವರು ಹೊಂಡದಲ್ಲಿ ಗಂಗಾ ಪೂಜೆ ಸಲ್ಲಿಸಿದರು. ಗ್ರಾಮದ ಮಹಿಳೆಯರು ಬ್ರಹ್ಮ ರಥೋತ್ಸವದ ನಂತರ ಸ್ವಾಮಿಗೆ ಬಾಯಿ ಬೀಗದ ಹರಕೆಯನ್ನು ಸಲ್ಲಿಸಿದರು. ಸಂಜೆ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.

ಇಂದು ರಥೋತ್ಸವ: ಮಂಗಳವಾರ ಸಂಜೆ 5 ಗಂಟೆಗೆ ವೀರಭದ್ರ ಸ್ವಾಮಿಯ ರಥೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಅನ್ನಸಂತರ್ಪಣೆ: ರಥೋತ್ಸವ ಹಾಗೂ ಆನೆ ಉತ್ಸವಗಳ ಅಂಗವಾಗಿ ಕಡೂರಿನ ಲೇಟ್ ಎಲ್.ಜಿ. ಮಹಾರುದ್ರಪ್ಪ ಶಾಂತಮ್ಮ ಅವರ ಸ್ಮರಣಾರ್ಥ ಮತ್ತು ಚನ್ನಗಿರಿಯ ಉಮೇಶಣ್ಣ, ದಿ. ಷಡಕ್ಷರಿ ಬಾಬು, ರೇಣುಕಣ್ಣ ಹಾಗೂ ದಿ. ಭದ್ರಣ್ಣ ವಂಶಸ್ಥರಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸುತ್ತಿದ್ದುದು ಕಂಡು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.