ಹೊಸದುರ್ಗ: ತಾಲ್ಲೂಕಿನ ಹುಣವಿನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಪ್ಪಗೆರೆಯಲ್ಲಿ ಚರಂಡಿಗಳು ಅವ್ಯವಸ್ಥೆಯ ಆಗರವಾಗಿವೆ. ಅವುಗಳಲ್ಲಿನ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಅನಾರೋಗ್ಯದ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

‘ಚರಂಡಿಗಳು ಸ್ವಚ್ಛತೆ ಕಾಣದೆ ವರ್ಷಗಳೇ ಕಳೆದಿದ್ದು, ಅಲ್ಲಲ್ಲಿ ಬ್ಲಾಕ್ ಆಗಿವೆ. ಕೊಳಚೆ ನೀರು ನಿಂತಲ್ಲೇ ನಿಂತಿದ್ದು, ಸೊಳ್ಳೆ ಹಾಗೂ ನೊಣಗಳ ಆವಾಸ ತಾಣವಾಗಿದೆ. ಚರಂಡಿ ಪಕ್ಕದಲ್ಲೇ ಮನೆಗಳಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆ ಬಂದರೇ ಚರಂಡಿ ನೀರು ರಸ್ತೆ ತುಂಬೆಲ್ಲಾ ಆವರಿಸಿಕೊಳ್ಳುತ್ತದೆ. ದುರ್ವಾಸನೆಯಿಂದಾಗಿ ವಾಸ ಮಾಡಲೂ ಕಷ್ಟವಾಗಿದೆ. ಆಗಾಗ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

‘ಎ.ಕೆ. ಕಾಲೊನಿಯ ಜನರ ಕಷ್ಟ ಕೇಳುವವರಿಲ್ಲ. ಮನೆ ಪಕ್ಕದಲ್ಲೇ ಚರಂಡಿ ನೀರು ಹರಿದು ಹೋಗುತ್ತಿದೆ. ಚರಂಡಿಗಳು ಬ್ಲಾಕ್ ಆಗಿದ್ದು, ಮಲೇರಿಯಾದಂತಹ ರೋಗಗಳ ಭೀತಿ ಎದುರಾಗಿದೆ. ಮಿನಿ ಟ್ಯಾಂಕರ್ ಸ್ವಚ್ಛತೆ ಕಾಣದೆ ಪಾಚಿ ಕಟ್ಟಿದೆ. ಈ ಎಲ್ಲಾ ಸಮಸ್ಯೆಗಳನ್ನೂ ಶೀಘ್ರದಲ್ಲೇ ಪರಿಹರಿಸಿ ಎಂದು ಹುಣವಿನಡು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಮನವಿ ನೀಡಿ ವಾರ ಕಳೆದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ’ ಎಂದು ಕಪ್ಪಗೆರೆ ಗ್ರಾಮದ ಕೆಂಚಪ್ಪ ನಾಯ್ಕ ಬೇಸರ ವ್ಯಕ್ತಪಡಿಸಿದರು.

ಇನ್ನೆರಡು ದಿನಗಳಲ್ಲಿ ಚರಂಡಿ ಹಾಗೂ ಮಿನಿ ಟ್ಯಾಂಕರ್ ಸ್ವಚ್ಛಗೊಳಿಸಲಾಗುವುದು ಎಂದು ಹುಣವಿನಡು ಗ್ರಾಮ ಪಂಚಾಯಿತಿ ಪಿಡಿಒ ರಮೇಶ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.