ಹೊಸದುರ್ಗ: ತಾಲ್ಲೂಕಿನ ಸಾಣೇಹಳ್ಳಿ ಮಠದ ನಿತ್ಯ ದಾಸೋಹ ಹಾಗೂ ವಿದ್ಯಾರ್ಥಿ ನಿಲಯದ ಬಳಕೆಗಾಗಿ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಭಕ್ತಾದಿಗಳು ಗುರುವಾರ ದವಸ ಧಾನ್ಯಗಳನ್ನು ಸಮರ್ಪಿಸಿದರು.

ಗ್ರಾಮಸ್ಥರು 9 ಕ್ವಿಂಟಲ್ ಅಕ್ಕಿ, 40 ಕೆ.ಜಿ. ಬೆಲ್ಲ, 5 ಕೆ.ಜಿ. ಒಣಮೆಣಸಿನಕಾಯಿ, 5 ಕೆ.ಜಿ. ಖಾರದ ಪುಡಿ ಸೇರಿದಂತೆ ವಿವಿಧ ದಿನಸಿ ಸಾಮಗ್ರಿಗಳನ್ನು ಮಠಕ್ಕೆ ಅರ್ಪಿಸಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಆಶೀರ್ವಾದ ಪಡೆದರು.

‘ಭಕ್ತಾದಿಗಳು ಕಾಯಕ ಮತ್ತು ದಾಸೋಹ ಪ್ರಜ್ಞೆ ಮೈಗೂಡಿಸಿಕೊಂಡಿರುವುದು ಶ್ಲಾಘನೀಯ. ಇಂತಹ ಸತ್ಕಾರ್ಯಗಳಿಂದ ಧರ್ಮದ ದಾರಿಯಲ್ಲಿ ನಡೆದು ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ವ್ಯಕ್ತಿ ಪರಿಶುದ್ಧವಾಗಿದ್ದರೆ ಸಮಾಜವೂ ಶುದ್ಧವಾಗುತ್ತದೆ. ಶಿಕ್ಷಣ ಮತ್ತು ದಾಸೋಹಕ್ಕೆ ನೀಡುವ ಈ ಸದ್ಭಾವನೆಗಳು ಇತರರಿಗೂ ಮಾದರಿಯಾಗಲಿ’ ಎಂದು ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದರು.

ಲಿಂಗದಹಳ್ಳಿ ಗ್ರಾಮಸ್ಥರು ಹಾಗೂ ಮಠದ ಭಕ್ತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-44-1855800575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.