ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್ ಜಿಹಾದ್‌ ತಡೆಗೆ ಪ್ರತ್ಯೇಕ ಕಾನೂನು ಅಗತ್ಯವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Last Updated 15 ಡಿಸೆಂಬರ್ 2022, 4:33 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಲವ್ ಜಿಹಾದ್’ ತಡೆಗೆ ರಾಜ್ಯದಲ್ಲಿ ಪ್ರತ್ಯೇಕ ಕಾನೂನು ರೂಪಿ ಸುವ ಹಾಗೂ ವಿಶೇಷ ಕಾರ್ಯಪಡೆ ರಚಿಸುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾನೂನು ರೂಪಿಸಲು ಸಂಘ ಪರಿವಾರದ ಸಂಘಟನೆಗಳು ಮನವಿ ಮಾಡಿವೆ. ರಾಜ್ಯದಲ್ಲಿ ಜಾರಿಯಲ್ಲಿರುವ ಮತಾಂತರ ನಿಷೇಧ ಕಾಯ್ದೆಯಲ್ಲಿ ಈ ಅಂಶ ಅಡಕವಾಗಿದ್ದು, ಪ್ರತ್ಯೇಕ ಕಾನೂನು ರೂಪಿಸುವ ಅವಶ್ಯ ಕತೆ ಸದ್ಯಕ್ಕೆ ಇಲ್ಲ. ಆದರೂ, ಮನವಿ ಪರಿಶೀಲಿಸಲಾಗುವುದು’ ಎಂದರು.

‘ವ್ಯಕ್ತಿಯೊಬ್ಬ ತನಗೆ ಇಷ್ಟ ವಾದ ಧರ್ಮ ಅನುಸರಿಸಲು ಸಂವಿಧಾನ ದಲ್ಲಿ ಅವಕಾಶವಿದೆ. ಮತ್ತೊಂದು ಧರ್ಮ ಅನುಸರಿಸುವ ಮುನ್ನ ಅರ್ಜಿ ಸಲ್ಲಿಸ ಬೇಕು. ಆಮಿಷವೊ ಅಥವಾ ಬಲ ವಂತದ ಮತಾಂತರವೊ ಎಂದು ಪರಿ ಶೀಲಿಸಿ ಅನುಮತಿ ನೀಡಲಾಗುವುದು. ಆದರೆ, ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಆಮಿಷದ ಮತಾಂತರ ಅವ್ಯಾಹತವಾಗಿ ನಡೆಯುತ್ತಿವೆ. ಮಠಾ ಧೀಶರ ಕೋರಿಕೆಯ ಮೇರೆಗೆ ಕಾನೂನು ರೂಪಿಸಲಾಗಿದೆ. ಮತಾಂತ ರಕ್ಕೆ ಸಂಬಂಧಿಸಿ ರಕ್ತ ಸಂಬಂಧಿಗಳು ದೂರು ನೀಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT