ಹೊಸದುರ್ಗ: ತಾಲ್ಲೂಕಿನ ಕಸಬಾ ಹೋಬಳಿಯ ಮಳಲಿ ಗ್ರಾಮದಲ್ಲಿ ನೆಲೆಸಿರುವ ಕಲ್ಲೇಶ್ವರಸ್ವಾಮಿ ನೂತನ ದೇವಾಲಯದ ಪ್ರಾರಂಭೋತ್ಸವ, ನಂದಿ ಪ್ರತಿಷ್ಠಾಪನೆ, ಕಳಸಾರೋಹಣ, ಅಷ್ಟಬಂಧ ಕುಂಭಾಭಿಷೇಕ, ಧಾರ್ಮಿಕ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮಗಳು ಏ. 26ರಿಂದ ಎರಡು ದಿನ ನಡೆಯಲಿವೆ.

ಏ. 26ರಂದು ಬೆಳಿಗ್ಗೆ 8.15ಕ್ಕೆ ಧ್ವಜಾರೋಹಣದ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ಮಳಲಿ ಕರಿಯಮ್ಮ ದೇವಿ, ಮಧುರೆಯ ಗುರು ಸಿದ್ಧರಾಮೇಶ್ವರ ಸ್ವಾಮಿ ಹಾಗೂ ಪೀಲಾಪುರದ ಆಂಜನೇಯ ಸ್ವಾಮಿ ದೇವರ ಕೂಡುಭೇಟಿ ನಡೆಯಲಿದೆ. ಸಂಜೆ 4ಕ್ಕೆ ಗಣಪತಿ ಪೂಜೆ, ಗಂಗಾ ಪೂಜೆ ನಂತರ 6 ಗಂಟೆಗೆ ನೂತನ ದೇವಾಲಯ ಪ್ರವೇಶ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ದೇವನಾಂದಿ, ನೂತನ ಶಿಲಾವಿಗ್ರಹಗಳಿಗೆ ವ್ಯಾಸಪೂರ ಮಂಗಳಾರತಿ ನಡೆಯಲಿದೆ.

ಏ. 27ರಂದು ನಸುಕಿನ 4 ಗಂಟೆಗೆ ಕಲ್ಲೇಶ್ವರ ಸ್ವಾಮಿಯ ಅಷ್ಟಬಂಧ ಪ್ರತಿಷ್ಠಾಪನೆ, ನೇತ್ರಬಂಧನ, ರುದ್ರಾಭಿಷೇಕ, ಕಳಶ ಪ್ರತಿಷ್ಠಾಪನೆ, ನವಗ್ರಹ ಪೂಜೆ, ರುದ್ರಹೋಮ, ಜಲಾಧಿಹೋಮ, ಪೂರ್ಣಾಹುತಿ ನಡೆಯಲಿದೆ. ಬೆಳಿಗ್ಗೆ 7.15ಕ್ಕೆ ಗ್ರಾಮದ ದೊಡ್ಡಬಾವಿ ಹತ್ತಿರದಿಂದ ಪೂರ್ಣಕುಂಭ ಪೂಜೆಯೊಂದಿಗೆ ಸಕಲ ವಾದ್ಯ ಗೋಷ್ಠಿಗಳೊಂದಿಗೆ ದೇವರುಗಳ ಮೆರವಣಿಗೆ, ನಂತರ ಶಿಖರ ಕಳಸಾರೋಹಣ, ಕುಂಭಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ.

ಹುಣಸಘಟ್ಟ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಕಲ್ಲೇಶ್ವರ ಸೇವಾ ಸಮಿತಿ ಅಧ್ಯಕ್ಷ ಕಸಬಿ ತಿಪ್ಪೇಶಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಮಾರಂಭವನ್ನು ಶಾಸಕ ಬಿ.ಜಿ. ಗೋವಿಂದಪ್ಪ ಉದ್ಘಾಟಿಸುವರು.

ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯಿರಿ ಎಂದು ಕಲ್ಲೇಶ್ವರ ಸೇವಾ ಸಮಿತಿ, ಕರಿಯಮ್ಮ ದೇವಿ ದೇವಸ್ಥಾನದ ಧರ್ಮದರ್ಶಿ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-44-493196324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.