ಶುಕ್ರವಾರ, ಡಿಸೆಂಬರ್ 2, 2022
22 °C

ಮಾರಮ್ಮದೇವಿಯ ಮರಿ ಪರಿಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ತಳಕು ಹೋಬಳಿ ಗೌರಸಮುದ್ರ ಮಾರಮ್ಮದೇವಿ ಮರಿ ಪರಿಷೆಯು ಸೆಪ್ಟೆಂಬರ್ 27ರಂದು ನಡೆಯಲಿದೆ.

ದೊಡ್ಡ ಜಾತ್ರೆ ಆಗಸ್ಟ್‌ 30ರಂದು ನಡೆದಿತ್ತು. ದೊಡ್ಡಜಾತ್ರೆ ನಡೆದ 5ನೇ ಮಂಗಳವಾರ ಮರಿ ಪರಿಷೆ ನಡೆಯುವುದು ವಾಡಿಕೆ.  ಮರಿ ಪರಿಷೆಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ತರುವುದಿಲ್ಲ. ಬದಲಾಗಿ ದೇವಿಯ ಆಭರಣ, ವಸ್ತ್ರಗಳನ್ನು ತಂದು ಕಟ್ಟೆ ಮೇಲೆ ಪ್ರತಿಷ್ಠಾಪಿಸಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ನೆರೆಯ ಸೀಮಾಂಧ್ರ ಸೇರಿದಂತೆ ಹಲವೆಡೆ ಭಕ್ತರು ಭಾಗವಹಿಸಲಿದ್ದು, ಸಿದ್ಧತೆ ಕೈಗೊಳ್ಳಲಾಗಿದೆ. ತಂಬಲು ಪ್ರದೇಶದಲ್ಲಿ ಪ್ರಾಣಿಬಲಿ ನಿಷೇಧಿಸಿದ್ದು, ತಪಾಸಣೆಗೆ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್‌ ರಘುಮೂರ್ತಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು