‘ಸಮಾಜದ ಸತ್ಯ ಸಾರುವ ಮಾಧ್ಯಮ ರಂಗಭೂಮಿ’

7

‘ಸಮಾಜದ ಸತ್ಯ ಸಾರುವ ಮಾಧ್ಯಮ ರಂಗಭೂಮಿ’

Published:
Updated:
Prajavani

ಹೊಸದುರ್ಗ: ರಂಗಭೂಮಿ ಸಮಾಜದ ಸತ್ಯವನ್ನು ಸಾರುವ ಮಾಧ್ಯಮ ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಶಿವಸಂಚಾರ–2018ರ ನಾಟಕ ಪ್ರದರ್ಶನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು.

ನೈಜ ಪ್ರತಿಭೆಯನ್ನು ಹೊರಹೊಮ್ಮಿಸುವ ಕೆಲಸವನ್ನು ರಂಗಭೂಮಿ ಮಾಡುತ್ತದೆ. ನಾಟಕ ಕಲೆಯ ಮೂಲಕ ಗಾಂಧೀಜಿ ಅವರು ಮಹಾತ್ಮರಾದರು. ಸಿದ್ದರೂಡರು, ನಾರಾಯಣ ಗುರುಗಳು ದೇವಸ್ಥಾನವೇ ಎಲ್ಲದೂ ಎಂದು ಭಾವಿಸಿದ್ದರು. ಅವರು ದೀಪದ ಮೂಲಕ ದೈವತ್ವ ಕಂಡುಕೊಂಡರು ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ಹಿರಿಯ ವಕೀಲ ಎಂ.ಶಿವಲಿಂಗಪ್ಪ, ಸಿನಿಮಾ ಮಾಧ್ಯಮದ ಹಾವಳಿಯಿಂದ ಇಂದು ನಾಟಕ ಕಲೆ ನಶಿಸಿ ಹೋಗುತ್ತಿದೆ. ಹಿಂದೆ ನೂರಾರು ಕಿ.ಮೀ ದೂರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ನಾಟಕ ವೀಕ್ಷಿಸಲು ಸಾವಿರಾರು ಜನರು ಹೋಗುತ್ತಿದ್ದರು. ಆದರೆ, ಇಂದು ಹತ್ತಿರದಲ್ಲೇ ನಡೆಯುವ ನಾಟಕ ನೋಡಲು ಜನರು ಬರದಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್‌. ಹನುಮಂತಪ್ಪ, ರಂಗಭೂಮಿ ಕ್ಷೇತ್ರದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ನಾಟಕೋತ್ಸವದ ಮೂಲಕ ನಾಡಿನ ಸನಾತನ ಸಂಸ್ಕೃತಿ, ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಪಿ. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಕಲ್ಮಠ, ಮಹಿಳಾ ಘಟಕದ ಅಧ್ಯಕ್ಷ ಡಾ.ಕೋಮಲ ಸ್ವಾಮಿ, ಕಾರ್ಯದರ್ಶಿ ಅನಿತಾ ರಾಜೇಶ್‌, ಮುಖಂಡರಾದ ಎಚ್‌.ಎಂ. ಸಿದ್ದಪ್ಪ, ಈಶ್ವರಪ್ಪ, ಉಮಾಪತಿ, ರಾಜಪ್ಪ ಹಾಜರಿದ್ದರು.

ಶಿವಸಂಚಾರ–2018ರ ಕಲಾವಿದರು ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !