ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ಹಾಗೂ ಚಳ್ಳಕೆರೆ ಕ್ಷೇತ್ರಗಳಲ್ಲಿ ಜೈನ ಸಮುದಾಯದ ಮತಗಳು 500 ದಾಟುವುದಿಲ್ಲ. ಆದರೂ ಜಾತಿ, ಮತ ಮೀರಿ ಜನರ ಪ್ರೀತಿ ಸಂಪಾದಿಸಿದ್ದ ಡಿ.ಸುಧಾಕರ್, ಎರಡೂ ಕ್ಷೇತ್ರಗಳಿಂದ 4 ಬಾರಿ ಶಾಸಕರಾಗಿದ್ದರು.

ಶ್ರೀಮಂತ ಜೈನ ವ್ಯಾಪಾರಿ ಮನೆತನದಲ್ಲಿ ಜನಿಸಿದ್ದರೂ ಎಲ್ಲರೊಟ್ಟಿಗೆ ಸಾಮಾನ್ಯರಂತಿದ್ದರು. ಚಳ್ಳಕೆರೆಯಿಂದ 1 ಬಾರಿ, ಹಿರಿಯೂರು ಕ್ಷೇತ್ರದಿಂದ 3 ಬಾರಿ ಗೆದ್ದು, 2 ಬಾರಿ ಸಚಿವರಾಗಿದ್ದರು. ರಾಜಕಾರಣದ ಜೊತೆಗೆ ಸಹಕಾರ ಕ್ಷೇತಕ್ಕೂ ಪ್ರವೇಶಿಸಿದ್ದ ಅವರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ (ಡಿಸಿಸಿ) ಚುನಾವಣೆಯಲ್ಲಿ 5 ಬಾರಿ (18 ವರ್ಷ) ಗೆಲುವು ದಾಖಲಿಸಿದ್ದರು.

ಚಳ್ಳಕೆರೆ ಕ್ಷೇತ್ರದಿಂದ 2 ಬಾರಿ (1978, 1989) ಶಾಸಕರಾಗಿದ್ದ ಎನ್.ಜಯಣ್ಣ ಅವರ ಉತ್ತರಾಧಿಕಾರಿಯಾಗಿ ರಾಜಕೀಯಕ್ಕೆ ಧುಮುಕಿದ್ದರು. ಜಯಣ್ಣ ಅವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅಣ್ಣನ ಮಗ ಸುಧಾಕರ್ಗೆ ಹಾದಿ ಮಾಡಿಕೊಟ್ಟಿದ್ದರು. 2004ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಯತ್ನದಲ್ಲೇ ಗೆದ್ದಿದ್ದರು.

ಚಳ್ಳಕೆರೆ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕಾರಣ, ಸಾಮಾನ್ಯ ಕ್ಷೇತ್ರವಾಗಿ ಬದಲಾದ ಹಿರಿಯೂರಿಗೆ ವಲಸೆ ಬಂದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿ ಬಿಜೆಪಿಯ ಎನ್.ಆರ್.ಲಕ್ಷ್ಮಿಕಾಂತ್ ವಿರುದ್ಧ 16,378 ಮತಗಳ ಅಂತರದಿಂದ ಜಯಿಸಿದ್ದರು.

ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಬಹುಮತ ಸಿಗದಿದ್ದಾಗ ಆಸರೆಯಾದ ಪಕ್ಷೇತರರಲ್ಲಿ ಡಿ.ಸುಧಾಕರ್ ಒಬ್ಬರು. ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಹಾಗೂ ಕ್ರೀಡಾ ಸಚಿವರಾಗಿದ್ದರು. ನಂತರ ಶಾಸಕ ಸ್ಥಾನದಿಂದ ಅನರ್ಹಗೊಂಡು ಸುಪ್ರೀಂ ಕೋರ್ಟ್ನಿಂದ ಸ್ಥಾನ ಮರಳಿ ಪಡೆದುಕೊಂಡಿದ್ದು ಇತಿಹಾಸ.

2013ರ ಚುನಾವಣೆಯಲ್ಲಿ ಸುಧಾಕರ್ ಅವರು ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹಿರಿಯೂರು ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಯಾದವ ಸಮುದಾಯದ ಎ.ಕೃಷ್ಣಪ್ಪ ಅವರಿಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಹಿರಿಯೂರಿನಲ್ಲಿ ಒಕ್ಕಲಿಗ (ಕುಂಚಿಟಿಗ ಒಕ್ಕಲಿಗ) ಮತಗಳು ನಿರ್ಣಾಯಕವಾಗಿದ್ದು, ಸುಧಾಕರ್ ಹಾಗೂ ಕೃಷ್ಣಪ್ಪ ನಡುವೆ ತೀವ್ರ ಹೋರಾಟ ನಡೆದಿತ್ತು. ಅಂತಿಮವಾಗಿ ಸುಧಾಕರ್ಗೆ ವಿಜಯಮಾಲೆ ಒಲಿದಿತ್ತು.

2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸುಧಾಕರ್ ಸೋತಿದ್ದರು. 2023ರ ಚುನಾವಣೆಯಲ್ಲಿ ಪೂರ್ಣಿಮಾ ವಿರುದ್ಧ ಗೆದ್ದು ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದರು.

ಅಧಿಕಾರ ಇಲ್ಲದಿದ್ದಾಗಲೂ ಜನರ ಜೊತೆಯಲ್ಲೇ ಇರುತ್ತಿದ್ದ ಅವರು ದಾನ ಧರ್ಮಕ್ಕೆ ಹೆಸರುವಾಸಿಯಾಗಿದ್ದರು. ಅವರನ್ನು ಜನ ಕೊಡುಗೈ ದಾನಿ, ಬಡವರ ಬಂಧು ಎಂದೇ ಗುರುತಿಸುತ್ತಿದ್ದರು.

ಮಾದರಿ ಡಿಸಿಸಿ ಬ್ಯಾಂಕ್...

ಡಿ.ಸುಧಾಕರ್ ಅವರು 2004 2007 2014 2019 2024ರಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರ ಅವಧಿಯಲ್ಲಿ ರಾಷ್ಟ್ರದ 2ನೇ ಅತ್ಯುತ್ತಮ ಸಹಕಾರ ಬ್ಯಾಂಕ್ ಎಂಬ ಗೌರವಕ್ಕೆ ಪಾತ್ರವಾಗಿ ರಾಷ್ಟ್ರಪ್ರಶಸ್ತಿ (2022) ಮುಡಿಗೇರಿಸಿಕೊಂಡಿತ್ತು. ರೈತರ ಮನೆ ಬಾಗಿಲಿಗೆ ತೆರಳಿ ಜಮೀನು ಇರುವವರಿಗೆ ಶೂನ್ಯ ಬಡ್ಡಿ ದರಲ್ಲಿ ₹ 3 ಲಕ್ಷದವರೆಗೆ ಸಾಲ ವಿತರಣೆ ಮಾಡಿಸಿದ್ದರು. ಜಿಲ್ಲೆಯಾದ್ಯಂತ ಸಾವಿರಾರು ಮಹಿಳಾ ಸ್ವ–ಸಹಾಯ ಸಂಘ ಗುಂಪುಗಳಿಗೆ ಸೌಲಭ್ಯಗಳನ್ನು ವಿತರಿಸಿ ಬ್ಯಾಂಕ್ ಅನ್ನು ಮಾದರಿಯಾಗಿ ರೂಪಿಸಿದ್ದರು.

‘ಜಾನುವಾರುಗಳ ಜೀವ ಉಳಿಸಿದರು’

‘2017ರಲ್ಲಿ ಭೀಕರ ಬರ ಬಂದಾಗ ಮೇವಿಲ್ಲದೇ ಜಾನುವಾರುಗಳು ಸಾಯುತ್ತಿದ್ದವು. ಆಗ ಸುಧಾಕರ್ ಕೊಳವೆಬಾವಿ ಮತ್ತು ಟ್ಯಾಂಕರ್ ನೀರು ಬಳಸುವ ಮೂಲಕ 500 ಎಕರೆ ಪ್ರದೇಶದಲ್ಲಿ ಮೇವು ಬೆಳೆಸಲು ಕ್ರಮವಹಿಸಿ ಹಳ್ಳಿಹಳ್ಳಿಗಳಿಗೆ ಪೂರೈಸಿ ತಾಲ್ಲೂಕಿನಾದ್ಯಂತ ಸಾವಿರಾರು ಜಾನುವಾರುಗಳ ಜೀವ ಉಳಿಸಿದ್ದರು. ಆ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದರು’ ಎಂದು ರೈತ ಮುಖಂಡ ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.