ಮಂಗಳವಾರ, ನವೆಂಬರ್ 30, 2021
21 °C

‘ನಾಯಕ ಶ್ರೀ’ ಪ್ರಶಸ್ತಿಗೆ ಮೀರಾಸಾಬಿಹಳ್ಳಿ ಶಿವಣ್ಣ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ಕರ್ನಾಟಕ ಇತಿಹಾಸ ಅಕಾಡೆಮಿಯ 2020ನೇ ಸಾಲಿನ ರಾಜ್ಯ ಮಟ್ಟದ ‘ನಾಯಕ ಶ್ರೀ’ ಪ್ರಶಸ್ತಿಗೆ ಜಿಲ್ಲೆಯ ಜಾನಪದ ಹಿರಿಯ ವಿದ್ವಾಂಸ ಮೀರಾಸಾಬಿಹಳ್ಳಿ ಶಿವಣ್ಣ ಅವರು ಆಯ್ಕೆಯಾಗಿದ್ದಾರೆ ಎಂದು ಇತಿಹಾಸ ಅಕಾಡೆಮಿಯ ರಾಜ್ಯ ಅಧ್ಯಕ್ಷ ದೇವರಕೊಂಡ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀರಾಸಾಬಿಹಳ್ಳಿ ಶಿವಣ್ಣ ಅವರು ಮ್ಯಾಸಬೇಡರ ಸಂಸ್ಕೃತಿಯ ಕುರಿತು ‘ದುರುಗ ಜಾನಪದ’, ‘ಮ್ಯಾಸಮಂಡಲ’, ‘ನಾಯಕನಹಟ್ಟಿ ಪಾಳೇಗಾರರು’, ‘ಕಾಡುಗೊಲ್ಲ ಸಮುದಾಯದ ಎತ್ತಪ್ಪ ಮತ್ತು ಜುಂಜಪ್ಪ ಸಾಂಸ್ಕೃತಿಕ ವೀರರ ಕುರಿತ ಮಹಾ ಪ್ರಬಂಧ’, ‘ಜಾನಪದ ಸರಸ್ವತಿ ಸಿರಿಯಜ್ಜಿ’, ‘ಗಣೆಯ ದನಿ’, ‘ಕಡಗೋಲು’, ‘ಗೌರಸಮುದ್ರದ ಮಾರಮ್ಮ’, ‘ಉಳ್ಳಾರ್ತಿ ಗೌರಮ್ಮ’, ‘ಮರೆಯಲಾರದ ನಾಟಕಕಾರ ಮರಡಿಹಳ್ಳಿ ಸೀತಾರಾಮ ರೆಡ್ಡಿ’ ನಾಟಕ ಹೀಗೆ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ ಒಟ್ಟು 40 ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ನಾಯಕ ಶ್ರೀ’ ಪ್ರಶಸ್ತಿಯ ಮೊತ್ತ ₹ 10 ಸಾವಿರ. ನವೆಂಬರ್ ಅಥವಾ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು