ಭಾನುವಾರ, ನವೆಂಬರ್ 29, 2020
20 °C

ಬಿಜೆಪಿಯಲ್ಲೇ ಗೂಂಡಾಗಳು ಹೆಚ್ಚಿರುವುದು: ರಾಮಲಿಂಗಾರೆಡ್ಡಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಬಿಜೆಪಿಯಲ್ಲೇ ಹೆಚ್ಚು ಗೂಂಡಾಗಳು ಇರುವುದು. ಡಿ.ಕೆ.ಶಿವಕುಮಾರ್ ಎಲ್ಲಿ ಗೂಂಡಾಗಿರಿ ಮಾಡಿದ್ದಾರೆ ಹೇಳಲಿ ಎಂದು ಶಾಸಕ ರಾಮಲಿಂಗಾರೆಡ್ಡಿ ಸವಾಲು ಹಾಕಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತಯಾಚನೆಗೆ ಶನಿವಾರ ಚಿತ್ರದುರ್ಗಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜಿಪಿಯವರು ಹಿಟ್ಲರ್ ಸಂಪುಟದಲ್ಲಿದ್ದ ಸುಳ್ಳಿನ ಮಂತ್ರಿಯಾಗಿದ್ದ ಗೋಬಲ್ಸ್ ವಂಶಸ್ಥರು. ಸುಳ್ಳು ಹೇಳದಿದ್ದರೆ ಬಿಜೆಪಿಗರಿಗೆ ನಿದ್ದೆ ಬರಲ್ಲ, ಊಟ ಸೇರಲ್ಲ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ತಪ್ಪಿನಿಂದ ಕೋವಿಡ್ ದೇಶದಲ್ಲಿ ವ್ಯಾಪಿಸಿದೆ. ಕೋವಿಡ್ ಲಸಿಕೆಯನ್ನು ಬಿಹಾರಕ್ಕೆ ಮಾತ್ರ ಏಕೆ ಉಚಿತವಾಗಿ ನೀಡಬೇಕು. ಲಸಿಕೆ ವಿಚಾರದಲ್ಲಿ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ಅತ್ಯಾಚಾರ ಪ್ರಕರಣದ ಬಗ್ಗೆಒಬ್ಬ ಮಹಿಳೆಯಾಗಿ ಶೋಭಾ ಕರಂದ್ಲಾಜೆ ಮಾತನಾಡಿಲ್ಲ. ಆದರೆ, ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಅನಂತಕುಮಾರ ಹೆಗಡೆ ಮಾತಿಗೆ ಕಿಮ್ಮತ್ತಿಲ್ಲ. ಎಲ್ಲಾ ಪಕ್ಷದವರನ್ನು‌ ಸೇರಿಸಿಕೊಂಡು ಬಿಜೆಪಿ ಕಲಸುಮಲೋಗರ ಆಗಿದೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು