ಸರ್ವರಿಗೂ ಇಷ್ಟವಾಗುವಂತೆ ಉದ್ಯಾನ ಅಭಿವೃದ್ಧಿಗೊಳಿಸಿ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

7
ಯೂನಿಯನ್ ಪಾರ್ಕ್ ಭೇಟಿ

ಸರ್ವರಿಗೂ ಇಷ್ಟವಾಗುವಂತೆ ಉದ್ಯಾನ ಅಭಿವೃದ್ಧಿಗೊಳಿಸಿ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

Published:
Updated:
Deccan Herald

ಚಿತ್ರದುರ್ಗ: ಇಲ್ಲಿನ ಯೂನಿಯನ್ ಉದ್ಯಾನವನ್ನು ನಗರದಲ್ಲೇ ಅತ್ಯಂತ ಸುಂದರವಾಗಿ ಕಾಣುವಂತೆ ಅಭಿವೃದ್ಧಿಗೊಳಿಸಿ, ಸರ್ವರೂ ಇಷ್ಟಪಡುವಂಥ ವಾತಾವರಣ ನಿರ್ಮಿಸಲು ಮುಂದಾಗಿ ಎಂದು ನಗರಸಭೆ ಅಧಿಕಾರಿಗಳಿಗೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಸೂಚಿಸಿದರು.

ಅಮೃತ್ ಯೋಜನೆಯಡಿ ₹ 73 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಪ್ರಸ್ತುತ ಉದ್ಯಾನದ ಸ್ಥಿತಿಗತಿಗಳನ್ನು ಶನಿವಾರ ಭೇಟಿ ನೀಡಿ ಅವರು ಪರಿಶೀಲಿಸಿದರು.

‘ಉದ್ಯಾನ ಅಭಿವೃದ್ಧಿಗೆ ನಿಗದಿ ಪಡಿಸಿರುವ ಮೊತ್ತಕ್ಕೆ ಶಾಸಕರ ನಿಧಿಯಿಂದ ₹ 50 ಲಕ್ಷ ಸೇರಿ ಅಂದಾಜು ₹ 2 ಕೋಟಿ ಅನುದಾನ ಕ್ರೋಢಿಕರಿಸಿ ಕೊಡಿಸುತ್ತೇನೆ. ಇಲ್ಲಿರುವ ಜಾಗವನ್ನು ಸಮರ್ಪಕವಾಗಿ ಬಳಿಸಿಕೊಂಡು ನಗರದಲ್ಲೇ ಮಾದರಿ ಆಗುವಂಥ ಉದ್ಯಾನ ನಿರ್ಮಿಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಉದ್ಯಾನದ ವಿಸ್ತೀರ್ಣ ಅಂದಾಜು 5 ಎಕರೆ ಇರಬಹುದು. ಅದರಲ್ಲಿ ಈಗಾಗಲೇ ಪಂಪ್‌ ಹೌಸ್, ನೆಲಮಟ್ಟದ ತೊಟ್ಟಿ, ಇಂದಿರಾ ಕ್ಯಾಂಟಿನ್ ನಿರ್ಮಾಣವಾಗಿದೆ. ಅದರ ಜತೆಗೆ ಹೊಸದೊಂದು ಪಂಪ್‌ಹೌಸ್ ಹಾಗೂ ಓವರ್ ಟ್ಯಾಂಕನ್ನು ಕರ್ನಾಟಕ ನಗರ ಕುಡಿವ ನೀರು ಮತ್ತು ಒಳಚರಂಡಿ ಮಂಡಳಿಯಿಂದ ನಿರ್ಮಿಸಲಾಗುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ ತಿಳಿಸಿದರು.

ಮಕ್ಕಳ ಆಟಿಕೆಗಳ ನಿರ್ಮಾಣ, ವಾಕಿಂಗ್ ಪಾಥ್, ಮಳೆ ನೀರು ಕೊಯ್ಲು ಹಾಗೂ ಹೊಸದಾಗಿ ಸಸಿಗಳನ್ನು ನೆಡಲಾಗುವುದು. ಹಳೆಯ ಶೌಚಗೃಹ ತೆರವುಗೊಳಿಸಿ, ಹೈಟೆಕ್ ಶೌಚಗೃಹ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.

ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ. ರವಿಶಂಕರ್ ಬಾಬು ಸೇರಿ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !