ಮೊಳಕಾಲ್ಮುರು: ಬಸವಣ್ಣ ನವರ ಆದರ್ಶಗಳು ಸರ್ವ ಕಾಲಕ್ಕೂ ಸಲ್ಲುವ ಜತೆಗೆ ಅನೇಕ ದೇಶಗಳಲ್ಲಿ ಪಾಲನೆಯಾಗುವ ಮೂಲಕ ವಿಶ್ವಗುರು ನಾಮಕ್ಕೆ ಸಾಠಿಯಾಗಿ ಹೊರಹೊಮ್ಮಿದ್ದಾರೆ ಎಂದು ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಡಿ. ಮಂಜುನಾಥ್ ಹೇಳಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಬಸವಣ್ಣ ಜಯಂತಿಯಲ್ಲಿ ಅವರು ಮಾತನಾಡಿದರು.

‘ಸಾಕಷ್ಟು ಕಷ್ಟ, ನೋವು, ವಿರೋಧ ಬಂದರೂ ಬಸವಣ್ಣನವರು ಸಮಾಜ ತಿದ್ದುವ ಕಾರ್ಯದಿಂದ ವಿಮುಖರಾಗಲಿಲ್ಲ, ಸಮ ಸಮಾಜ ಸ್ಥಾಪನೆ ಅವರ ಕನಸಾಗಿತ್ತು. ಇದನ್ನು ಇನ್ನಾದರೂ ಕಾರ್ಯರೂಪಕ್ಕೆ ತರಲು ಶ್ರಮಿಸಬೇಕಿದೆ. ಅವರ ಆದರ್ಶಗಳನ್ನು ಮುಖ್ಯವಾಗಿ ಯುವಕರು ಪಾಲಿಸಬೇಕಿದೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಎಂ. ಮಂಜುನಾಥ್, ತಹಶೀಲ್ದಾರ್ ಟಿ. ಜಗದೀಶ್ ಮಾತನಾಡಿದರು. ವೀರಶೈವ ಸಮಾಜದ ಜಿಲ್ಲಾ ಘಟಕದ ವಿಜಯ್ ಕುಮಾರ್, ಚಂದ್ರಶೇಖರ ಗೌಡ, ನಾಗೇಂದ್ರಪ್ಪ, ಯರಿಸ್ವಾಮಿ, ಮಹಿಳಾ ಘಟಕದ ರೂಪಾ ವಿನಯ್ ಕುಮಾರ್, ಯುವ ಘಟಕದ ಅಧ್ಯಕ್ಷ ಯರಿಸ್ವಾಮಿ, ಬಿಇಒ ಎನ್. ನಿರ್ಮಲಾದೇವಿ, ಬಿಜೆಪಿ ತಾಲ್ಲೂಕು ಘಟಕದ ಮಂಡಲಾಧ್ಯಕ್ಷ ಕೆ.ಟಿ. ಶ್ರೀರಾಮರೆಡ್ಡಿ, ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-44-1426064462

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.