ಮೊಳಕಾಲ್ಮುರು: ‘ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಬಸವಣ್ಣ ಅವರಿಗೂ ಮೊದಲು ವಚನಗಳನ್ನು ರಚಿಸುವ ಮೂಲಕ ಆದ್ಯ ವಚನಕಾರರಾಗಿ ದೇವರ ದಾಸಿಮಯ್ಯ ಗುರುತಿಸಿಕೊಂಡಿದ್ದಾರೆ’ ಎಂದು ತಹಶೀಲ್ದಾರ್ ಟಿ. ಜಗದೀಶ್ ಹೇಳಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಟ್ಟೆ ನೇಯ್ಗೆ ಮಾಡುವ ಕುಲ ಕಸುಬು ನೆಚ್ಚಿಕೊಂಡಿರುವ ನೇಕಾರ ಜನಾಂಗದ ಮೂಲ ಪುರುಷರಾಗಿಯೂ ದಾಸಿಮಯ್ಯ ಗುರುತಿಸಿಕೊಂಡಿದ್ದಾರೆ. ನೇಕಾರರು ಜಾಗತೀಕರಣದ ಪ್ರಭಾವಕ್ಕೆ ಬಲಿಯಾಗಿ ಸಂಕಷ್ಟದಲ್ಲಿದೆ. ಆದ್ದರಿಂದ ಸಮುದಾಯದ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಉಪ ತಹಶೀಲ್ದಾರ್ ಕೆ. ಮಹಾಂತೇಶ್, ಅಧಿಕಾರಿಗಳಾದ ಸಿಡಿಪಿಒ ನವೀನ್ ಕುಮಾರ್, ಡಾ.ರಂಗಪ್ಪ, ನೇಕಾರ ಜನಾಂಗದ ಮುಖಂಡರಾದ ಮಂಚಿ ಮಾರುತಿ, ಕೆ.ಸಿ. ಮಂಜುನಾಥ್, ಜಿ. ಶ್ರೀನಿವಾಸ್, ದಿನೇಶ್, ಶಿಕ್ಷಕ ತಿಪ್ಪೇಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-44-69912338

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.