ಮೊಳಕಾಲ್ಮುರು: ಕೆಲ ವರ್ಷಗಳ ಹಿಂದೆ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಅಪಘಾತವಾದ ವಾಹನಗಳು, ವಶಕ್ಕೆ ಪಡೆದ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿರುವ ದೃಶ್ಯ ಸಾಮಾನ್ಯವಾಗಿತ್ತು. ಅದರೆ, ಈಗ ಸಿಬ್ಬಂದಿಯ ಶ್ರಮದಿಂದಾಗಿ ಠಾಣೆಯು ಹೊಸ ರೂಪ ಪಡೆದುಕೊಂಡಿದ್ದು, ಇಡೀ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ.

ತಾಲ್ಲೂಕು ಕಚೇರಿ ಸ್ಥಳಾಂತರ ಮತ್ತು ಮುಂಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಾಣದ ನಂತರ ಪೊಲೀಸ್ ಠಾಣೆಗೆ ನಿರ್ದಿಷ್ಟ ಜಾಗ ಸಿಕ್ಕಿತು. ಇದನ್ನು ಸದುಪಯೋಗ ಮಾಡಿಕೊಂಡ ಸಿಬ್ಬಂದಿ ಆವರಣವನ್ನು ಸಮತಟ್ಟು ಮಾಡಿ ಉದ್ಯಾನ ಅಭಿವೃದ್ಧಿ ಮಾಡಿದ್ದಾರೆ.

ಕಾಡು ಬಾದಾಮಿ, ಅಶೋಕ ಗಿಡ, ಆಲಂಕಾರಿಕ ಸಸಿಗಳು, ಹೊಂಗೆ, ಬೇವು ಸೇರಿ ಹಲವು ಗಿಡಗಳನ್ನು ನೆಟ್ಟಿದ್ದಾರೆ. ಜತೆಗೆ ಬಂದವರಿಗೆ ಕುಳಿತುಕೊಳ್ಳಲು ಉತ್ತಮ ನೆರಳು ಹಾಗೂ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯರಸ್ತೆಯಿಂದ ಠಾಣೆಗೆ ಹೋಗುವ ಮಾರ್ಗದಲ್ಲಿ ಸೈಬರ್ ಅಪರಾಧ, ವಾಹನ ಚಾಲನೆ, ಕುಡಿತದ ದುಷ್ಪರಿಣಾಮ ಸೇರಿದಂತೆ ಹಲವು ಜಾಗೃತಿ ಫಲಕಗಳನ್ನೂ ಹಾಕಲಾಗಿದೆ.

‘ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಠಾಣೆಯ ಆವರಣ ಅಭಿವೃದ್ಧಿ ಮಾಡಲಾಗಿದೆ. ನಮ್ಮ ಕಾರ್ಯಕ್ಕೆ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಕೆಲ ನರ್ಸರಿಯವರು ಸಹಕಾರ ನೀಡಿದ್ದಾರೆ’ ಎಂದು ಪಿಎಸ್ಐ ಮಹೇಶ್ ಹೊಸಪೇಟೆ ಹೇಳಿದರು.

ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-44-1725653971

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.