ಮೊಳಕಾಲ್ಮುರು: ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಸೋಮವಾರ ರಾತ್ರಿ ಏಕಾಏಕಿ ಆರಂಭವಾದ ಮಳೆ, ಗಾಳಿಗೆ ವ್ಯಾಪಕ ಹಾನಿಯಾಗಿದೆ.

ಸತತ ಒಂದು ಗಂಟೆ ಮಳೆ ಸುರಿದಿದ್ದು, ಗಾಳಿ ರಭಸಕ್ಕೆ ಮನೆಗಳು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಮರಗಳು ಧರೆಗೆ ಉರುಳಿದ್ದು, ಎದ್ದಲ ಬೊಮ್ಮಯ್ಯನಹಟ್ಟಿ ಮತ್ತು ಬಿ.ಜಿ. ಕೆರೆಯಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ.

ಎದ್ದಲ ಬೊಮ್ಮಯ್ಯನಹಟ್ಟಿಯಲ್ಲಿ ಕೃಷ್ಣಮೂರ್ತಿ, ತಿಪ್ಪೇಶ್, ರಾಮಚಂದ್ರ, ಚಂದ್ರಣ್ಣ, ಕೊರಿಯರ್ ಪಾಲಯ್ಯ, ಗೋಪಿ, ರುದ್ರಪ್ಪ, ಮಹಾಂತೇಶ್ ಅವರಿಗೆ ಸೇರಿದ ಮನೆಗಳು ಸೇರಿ ಒಟ್ಟು 16 ಮನೆಗಳಿಗೆ ಹಾನಿಯಾಗಿದೆ. ಕೆಲ ಮನೆಗಳ ಚಾವಣಿ ಪೂರ್ಣ ಹಾರಿ ಹೋಗಿದ್ದರೆ, ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ದವಸ, ಧಾನ್ಯ, ಅಡುಗೆ ಸಾಮಗ್ರಿಗಳು ಹಾನಿಗೀಡಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ.

‘ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾತ್ರ ಸ್ಥಳಕ್ಕೆ ಭೇಟಿ ನೀಡಿದ್ದು, ಇಲ್ಲಿಯವರೆಗೆ ಬೇರೆ ಯಾವುದೇ ಅಧಿಕಾರಿಯಾಗಲಿ ಜನಪ್ರತಿನಿಧಿಗಳಾಗಿ ಆಗಮಿಸಿ ನೋವು ಆಲಿಸಲಿಲ್ಲ. ಸರ್ಕಾರ ಕೂಡಲೇ ಪರಿಹಾರಕ್ಕೆ ಧಾವಿಸಬೇಕು’ ಎಂದು ಸಂತ್ರಸ್ತರು ಮನವಿ ಮಾಡಿದರು.

ಇದೇ ಗ್ರಾಮದಲ್ಲಿ ಬೃಹತ್ ಮರಗಳು ಬಿದ್ದು ಮಲ್ಲಿಕಾರ್ಜುನ್ ಮತ್ತು ಕುಮಾರ್ ಅವರಿಗೆ ಸೇರಿದ 2 ಆಟೊಗಳು, ತಿಪ್ಪೇಸ್ವಾಮಿ, ಮೂರ್ತಿ, ತಿಪ್ಪಯ್ಯ ಅವರಿಗೆ ಸೇರಿದ 3 ಬೈಕ್ಗಳಿಗೆ ಹಾನಿಯಾಗಿದೆ. ಹಾನಗಲ್- ರಾಯದುರ್ಗ ಹೆದ್ದಾರಿ ಮೇಲೆ ಮರಗಳು ಉರುಳಿ ಬಿದ್ದಿದ್ದ ಕಾರಣ ಮೊಳಕಾಲ್ಮುರು–ರಾಯದುರ್ಗ ಮಧ್ಯೆ ಸಂಚಾರ ಅಸ್ತವ್ಯಸ್ಥವಾಗಿತ್ತು. ಬಿ.ಜಿ. ಕೆರೆಯಲ್ಲಿ ಸೂರ್ಯಾ ಡಾಬಾದ ಅಡುಗೆ ಕೋಣೆ ಚಾವಣಿ ಹಾರಿ ಹೋಗಿದೆ.

ಕೋನಸಾಗರ, ಕೊಂಡ್ಲಹಳ್ಳಿ, ಮೊಗಲಹಳ್ಳಿ, ಬಿ.ಜಿ. ಕೆರೆ ಸುತ್ತಮುತ್ತ ಗಾಳಿ ಸಹಿತ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ. ರಾತ್ರಿ ಇಡೀ ವಿದ್ಯುತ್ ಕಡಿತವಾಗಿದ್ದು ಜನರು ಕತ್ತಲಲ್ಲಿ ಕಾಲ ಕಳೆಯಬೇಕಾಯಿತು. ಕಂದಾಯ ಇಲಾಖೆ ಮೂಲಗಳ ಪ್ರಕಾರ ಒಟ್ಟು 14 ಮನೆಗಳಿಗೆ ಮತ್ತು 20 ಗುಂಟೆ ಅಡಿಕೆ, 20 ಗುಂಟೆ ಪಪ್ಪಾಯ ಬೆಳೆಗೆ ಹಾನಿಯಾಗಿದೆ. ಬೆಸ್ಕಾಂ ಅಧಿಕಾರಿಗಳು ಒಟ್ಟು 22 ವಿದ್ಯುತ್ ಕಂಬಗಳು ಹಾನಿಗೀಡಾದ್ದು ದುರಸ್ತಿ ಮಾಡಿಸಲಾಗಿದೆ ಎಂದು ತಿಳಿಸಿದರು.

ಮೊಳಕಾಲ್ಮುರು ಮಳೆಮಾಪನ ಕೇಂದ್ರದಲ್ಲಿ 16.2 ಮಿ.ಮೀ, ರಾಯಾಪುರ ಕೇಂದ್ರದಲ್ಲಿ 16 ಮಿಮೀ ಮತ್ತು ಬಿ.ಜಿ.ಕೆರೆ ಕೇಂದ್ರದಲ್ಲಿ 32.2 ಮಿಮೀ ಮಳೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-44-666601099

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.