ಮೊಳಕಾಲ್ಮುರು: ವಿಧಾನಸಭಾ ಕ್ಷೇತ್ರದ ರುದ್ರಮ್ಮನಹಳ್ಳಿಯಲ್ಲಿ ಪ್ರಮುಖ ಗ್ರಾಮೀಣ ಕ್ರೀಡೆಯಾಗಿರುವ ಜೋಡೆತ್ತು ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಶನಿವಾರ ಆಯೋಜಿಸಲಾಗಿತ್ತು.

ಗ್ರಾಮದ ಗಜಗುಡ್ಲ ಪಾಪಮ್ಮ ಹಾಗೂ ಗಂಜಿಕಪ್ಲೆ ಸುರೇಶ ಅವರ ಹೊಲದಲ್ಲಿ ಸ್ಥಳೀಯ ವಾಲ್ಮೀಕಿ ಬಳಗವು ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.

ಒಟ್ಟು 34 ಸ್ಪರ್ಧಿಗಳು ಭಾಗವಹಿಸಿದ್ದು, ಈ ಪೈಕಿ ಪತ್ತೆಮರದ ಹಟ್ಟಿಯ ಸಣ್ಣೋಬಯ್ಯ ಅವರ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದು ₹20,000 ನಗದು ಬಹುಮಾನ ಮತ್ತು ಪಾರಿತೋಷಕ ಪಡೆದವು. ಕುಂಚಿಗಿನಾಳ್ ಮಣಿ ಜೋಡೆತ್ತುಗಳು ದ್ವಿತೀಯ ಸ್ಥಾನ ಪಡೆದು ₹15,000 ನಗದು, ಪಾರಿತೋಷಕ ತಮ್ಮದಾಗಿಸಿಕೊಂಡವು. ತೋಡ್ಲಾರಹಟ್ಟಿಯ ಪೂಜಾರಿ ಬೋರಯ್ಯ ಅವರ ಎತ್ತುಗಳು ತೃತೀಯ ಸ್ಥಾನ ಪಡೆದು ₹10,000 ನಗದು, ಪಾರಿತೋಷಕಕ್ಕೆ ಆಯ್ಕೆಯಾದವು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಸ್ಪರ್ಧೆ ವೀಕ್ಷಿಸಲು ಹತ್ತಾರು ಹಳ್ಳಿಗಳ ಜನರು ನೆರೆದಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-44-1321680345

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.