ಮೊಳಕಾಲ್ಮುರು: ತಾಲ್ಲೂಕಿನ ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಮಠದ ಆವರಣದಲ್ಲಿ ಏ.20 ರಂದು ನಡೆಯಲಿರುವ ಬಸವ ಜಯಂತಿಯಲ್ಲಿ ಬಸವಣ್ಣನ ನೂತನ ಪುತ್ಥಳಿ ಅನಾವರಣ ಕಾರ್ಯಕ್ರಮ ಜರುಗಲಿದೆ ಎಂದು ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

ಮಠದ ಆವರಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಭಕ್ತರಾದ ಮೊಳಕಾಲ್ಮುರಿನ ಸಾಂಬಶಿವಮೂರ್ತಿ ಅವರು ಮೂರ್ತಿಯನ್ನು ಕೊಡುಗೆ ನೀಡುತ್ತಿದ್ದಾರೆ. ಅನಾವರಣದ ಜತೆಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಗಡಿಭಾಗವಾದ ಸಿದ್ದಯ್ಯನಕೋಟೆ ಮಠದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರು ಸಹಕಾರ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಮಠದ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಟೇಲ್ ಜಿ., ಪಾಪನಾಯಕ, ಕಾರ್ಯದರ್ಶಿ ಪಿ.ಆರ್. ಕಾಂತರಾಜ್, ಮುಖಂಡರಾದ ಕೆ. ಬಸಣ್ಣ, ಎಸ್.ಡಿ. ತಿಪ್ಪೇಸ್ವಾಮಿ, ಜಿ. ಶಿವನಗೌಡ, ಎಸ್.ಪಿ. ಲಕ್ಷ್ಮಣ್, ವಾಂಜ್ರೆ ರಮೇಶ್, ಬಿ.ಜಿ.ಕೆರೆ ನಾಗೇಂದ್ರಪ್ಪ, ಅಕ್ಕ ಬಳಗದ ಅಧ್ಯಕ್ಷೆ ಎಂ.ಬಿ. ಮಹಾಂತಮ್ಮ, ಸಂಗೀತ ಶಿಕ್ಷಕ ಕೆ.ಒ. ಶಿವಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-44-22459212

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.