ಮೊಳಕಾಲ್ಮುರು: ಪಟ್ಟಣದ ರಾಯದುರ್ಗ- ಹಾನಗಲ್ ಮುಖ್ಯರಸ್ತೆಯ ಡಿವೈಡರ್ನಲ್ಲಿ ನೂತನವಾಗಿ ಬೀದಿದೀಪ ಅಳಡಿಸುವ ಕಾಮಗಾರಿಗೆ ಶಾಸಕ ಎನ್.ವೈ. ಗೋಪಾಲಕೃಷ್ಣ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ತಾಲ್ಲೂಕು ಕಚೇರಿ ಮುಂಭಾಗದಿಂದ ರಾಯದುರ್ಗ ರಸ್ತೆಯ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ದೀಪ ಅಳವಡಿಕೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹85 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ರಸ್ತೆ ವಿಸ್ತರಣೆ ಸಮಯದಲ್ಲಿ ಅಳವಡಿಸಿರುವ ದೀಪಗಳು ಹೆಚ್ಚಿನ ಬೆಳಕು ನೀಡುತ್ತಿರಲಿಲ್ಲ. ಹೊಸ ಮಾದರಿ ದೀಪ ಅಳವಡಿಕೆ ನಂತರ ಮುಖ್ಯರಸ್ತೆ ಅಂದ ಹೆಚ್ಚುವ ಜತೆಗೆ ರಾತ್ರಿ ವೇಳೆ ವಾಹನ ಸವಾರರಿಗೆ ಅನುಕೂಲವಾಗಲಿದೆ. ಹಳೆಯ ದೀಪಗಳನ್ನು ಬೇರೆ ಬಡಾವಣೆಗಳಲ್ಲಿ ಅಳವಡಿಸಲಾಗುವುದು ಎಂದು ಗೋಪಾಲಕೃಷ್ಣ ಮಾಹಿತಿ ನೀಡಿದರು.

ತಹಶೀಲ್ದಾರ್ ಟಿ. ಜಗದೀಶ್, ಮುಖಂಡರಾದ ಗುರುರಾಜಪ್ಪ, ಪಟೇಲ್ ಜಿ. ಪಾಪನಾಯಕ, ಎಸ್.ಖಾದರ್, ಜಿ. ಪ್ರಕಾಶ್, ಕೃಷ್ಣ, ವಿ. ದೇವಯ್ಯ, ಬಡೋಬನಾಯಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-44-1536535431

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.