ಮೊಳಕಾಲ್ಮುರು: ತಾಲ್ಲೂಕಿನ ಜನರಿಗೆ ಶುದ್ಧ ಕುಡಿಯುವ ನೀರನ್ನು ಶಾಶ್ವತವಾಗಿ ಪೂರೈಸುವ ಉದ್ದೇಶದಿಂದ ಅನುಷ್ಠಾನಕ್ಕೆ ತರಲಾದ ತುಂಗಭದ್ರಾ ಹಿನ್ನೀರು ಯೋಜನೆಗೆ ನೀರಿನ ಕೊರತೆ ಎದುರಾಗಿದೆ. ಇದರಿಂದ ನೀರು ಸರಬರಾಜು ಸ್ಥಗಿತವಾಗಿದ್ದು, ತಾಲ್ಲೂಕಿನಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗುವ ಆತಂಕ ಎದುರಾಗಿದೆ.

ಕಳೆದ ವರ್ಷ ಕಡಿಮೆ ಮಳೆ ಸುರಿದ ಕಾರಣ ಅಂತರ್ಜಲ ಕುಸಿತವಾಗಿದೆ. ಜನವರಿ ಆರಂಭದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದನ್ನು ಗುರುತಿಸಲಾಗಿತ್ತು. ತುಂಗಭದ್ರಾ ಹಿನ್ನೀರು ಸರಬರಾಜು ಆರಂಭವಾದ ಕಾರಣ ಸಮಸ್ಯೆಗೆ ತಾತ್ಕಾಲಿಕ ತಡೆ ಬಿದ್ದಿತ್ತು. ಈಗ ತುಂಗಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ಕಮ್ಮಿಯಾಗಿದೆ. 15 ದಿನಗಳಿಂದ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ.

ತುಂಗಭದ್ರಾ ಜಲಾಶಯದಿಂದ ಮೊಳಕಾಲ್ಮುರು, ಪಾವಗಡ ಪಟ್ಟಣ ಸೇರಿದಂತೆ ಕೂಡ್ಲಿಗಿ, ಚಳ್ಳಕೆರೆ, ಮೊಳಕಾಲ್ಮುರು, ಪಾವಗಡ, ಚಿತ್ರದುರ್ಗದ ತುರುವನೂರು ಹೋಬಳಿ ವ್ಯಾಪ್ತಿಯ ಒಟ್ಟು 1,165 ಜನವಸತಿ ಪ್ರದೇಶಗಳಿಗೆ ನೀರು ನೀಡುವ ಗುರಿ ಹೊಂದಲಾಗಿದೆ. ಕೆಲ ತಾಂತ್ರಿಕ ಕಾರಣಗಳಿಂದ ಈ ಪೈಕಿ ಶೇ 70ರಷ್ಟು ಜನವಸತಿ ಪ್ರದೇಶಗಳಿಗೆ ಯೋಜನೆಯಲ್ಲಿ ನೀರು ನೀಡಲಾಗುತ್ತಿತ್ತು. ಜಲಾಶಯದಲ್ಲಿ ನೀರಿನ ಲಭ್ಯತೆ ಇಲ್ಲದ ಕಾರಣ ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಸ್ಥಗಿತವಾಗಿದೆ ಎಂದು ನೀರು ಪೂರೈಕೆ ಹೊಣೆ ಹೊತ್ತಿರುವ ಮೆಘಾ ಕಂಪನಿ ಅಧಿಕಾರಿಗಳು ಮಾಹಿತಿ ನೀಡಿದರು.

‘ತುಂಗಭದ್ರಾ ಜಲಾಶಯ ಗೇಟ್ಗೆ ಹಾನಿ, ಗೇಟ್ಗಳ ಬದಲಾವಣೆಯಿಂದಾಗಿ ಹಿನ್ನೀರು ಭಾಗದಲ್ಲಿ ಬೇಗ ನೀರು ಕಡಿಮೆಯಾಗಿದೆ. ಮಳೆ ಬಂದು ಜಲಾಶಯಕ್ಕೆ ನೀರು ಬರುವ ತನಕ ನೀರು ಪೂರೈಕೆ ಸಾಧ್ಯವಿಲ್ಲ. ಯೋಜನೆಯಲ್ಲಿ ಇದೇ ಪ್ರಥಮ ಬಾರಿಗೆ ಬೇಸಿಗೆಯಲ್ಲಿ ನೀರು ಪೂರೈಕೆ ಮಾಡುತ್ತಿರುವುದರಿಂದ ಇನ್ನೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಇಲ್ಲ. ಮಳೆ ಬರುವ ತನಕ ಪರಿಸ್ಥಿತಿ ಸುಧಾರಣೆ ಸಾಧ್ಯವಿಲ್ಲ’ ಎಂದರು.

‘ಮೊಳಕಾಲ್ಮುರು ತಾಲ್ಲೂಕಿನ 127 ಜನವಸತಿಗಳ ಪೈಕಿ ಮೊಳಕಾಲ್ಮುರು ಪಟ್ಟಣ ಸೇರಿ ಒಟ್ಟು 70 ಪ್ರದೇಶಗಳಿಗೆ ತುಂಗಭದ್ರಾ ಹಿನ್ನೀರು ಪೂರ್ಣವಾಗಿ ಪೂರೈಸಲಾಗುತ್ತಿತ್ತು. ಈಗ ಸಂಪೂರ್ಣ ಸ್ಥಗಿತವಾಗಿದ್ದು, ಹಿಂದೆ ಬಳಕೆಯಾಗುತ್ತಿದ್ದ ಕೊಳವೆಬಾವಿಗಳ ಮೂಲಕ ನೀರು ನೀಡುವಂತೆ ಸೂಚಿಸಲಾಗಿದೆ. ಎಲ್ಲಿಯೂ ನೀರಿನ ಸಮಸ್ಯೆ ಬಗ್ಗೆ ವರದಿಯಾಗಿಲ್ಲ. ಅಗತ್ಯ ಇರುವ ಕಡೆ ಕೊಳವೆಬಾವಿಗಳ ದುರಸ್ತಿಗೆ ಸೂಚಿಸಲಾಗಿದೆ’ ಎಂದು ಪಂಚಾಯತ್ ರಾಜ್ ಕುಡಿಯುವ ನೀರು ವಿಭಾಗದ ಪ್ರಜ್ವಲ್ ಮಾಹಿತಿ ನೀಡಿದರು.

‘ಮೊಳಕಾಲ್ಮುರು ಪಟ್ಟಣ ವ್ಯಾಪ್ತಿಯ 16 ವಾರ್ಡ್ಗಳ ಪೈಕಿ 10 ವಾರ್ಡ್ಗಳಿಗೆ ಕೆಲ ತಿಂಗಳಿಂದ ತುಂಗಭದ್ರಾ ಹಿನ್ನೀರು ಪೂರೈಕೆಯಾಗುತ್ತಿತ್ತು, ಈಗ ಸ್ಥಗಿತವಾಗಿರುವ ಪರಿಣಾಮ ಮೊದಲಿನಂತೆ ರಂಗಯ್ಯನದುರ್ಗ ಜಲಾಶಯದಿಂದ ನೀರು ನೀಡಲು ಕ್ರಮ ಕೈಗೊಳ್ಳಲಾಗಿದೆ. ಆಲಮ್ ಸೇರಿ ಅಗತ್ಯ ಸಾಮಗ್ರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಂದು ವಾರದಲ್ಲಿ ಎಲ್ಲಾ ವಾರ್ಡ್ಗಳಿಗೆ ಪೂರ್ಣ ಪ್ರಮಾಣದಲ್ಲಿ ಜಲಾಶಯದ ನೀರು ನೀಡಲಾಗುವುದು. ಶುದ್ಧತೆ ಬಗ್ಗೆ ದೂರುಗಳು ಇರುವ ಕಾರಣ ಬಳಕೆಗೆ ಮಾತ್ರ ಈ ನೀರು ಉಪಯೋಗಿಸಿ, ಕುಡಿಯಲು ಶುದ್ಧ ಘಟಕಗಳ ನೀರು ಬಳಸುವಂತೆ ಪ್ರಚಾರ ಮಾಡಲಾಗುತ್ತಿದೆ’ ಎಂದು ಮುಖ್ಯಾಧಿಕಾರಿ ಫಿರೋಜ್ ಖಾನ್ ತಿಳಿಸಿದರು.

‘ನೀರಿನ ಕೊರತೆಯಿಂದಾಗಿ ಬಳಕೆ ಹೆಚ್ಚಿರುವ ಮನೆಯವರು, ಹೋಟೆಲ್ನವರು, ರೇಷ್ಮೆಸೀರೆ ಉದ್ಯಮದವರು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕನಿಷ್ಠ ಒಂದು ವಾರಕ್ಕೆ ಒಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ಇದನ್ನು ಹೇಗೆ ಶೇಖರಿಸಿ ಬಳಕೆ ಮಾಡಬೇಕು ಎಂದು ಅರ್ಥವಾಗುತ್ತಿಲ್ಲ’ ಎಂದು ಸ್ಥಳೀಯರಾದ ರಾಮಚಂದ್ರಪ್ಪ, ತಿಪ್ಪೇಸ್ವಾಮಿ ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-44-1721798656

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.