ಮೊಳಕಾಲ್ಮುರು: ‘ಉದ್ಯೋಗಖಾತ್ರಿ ಯೋಜನೆಯ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರ ಹಿತ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಯೋಜನೆ ಕಾರ್ಮಿಕರು ಮನವಿ ಮಾಡಿದರು.

ಈಚೆಗೆ ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಆಗ್ರಹಿಸಿದರು.

ಯೋಜನೆ ಅಡಿ ಕಾರ್ಮಿಕರು ತಮಗೆ ಬೇಕಾದ ಸಮಯದಲ್ಲಿ ವಾರ್ಷಿಕ 100 ದಿನಗಳ ಕೂಲಿ ಕೆಲಸ ಪಡೆದುಕೊಳ್ಳಬಹುದಾಗಿತ್ತು, ತಿದ್ದುಪಡಿ ಕಾಯ್ದೆಯಲ್ಲಿ ಇದು ಸಾಧ್ಯವಿಲ್ಲ. ಇದರಿಂದ ಲಕ್ಷಾಂತರ ಕೂಲಿ ಕಾರ್ಮಿಕರು ಕೆಲಸವಿಲ್ಲದೇ ತೊಂದರೆಗೀಡಾಗಿದ್ದಾರೆ. ಬಾಕಿ ಕೂಲಿಯನ್ನು ಭತ್ಯೆ ಸಹಿತ ನೀಡಬೇಕು, ಈ ವರ್ಷದ ಕ್ರಿಯಾ ಯೋಜನೆಗೆ ತಕ್ಷಣವೇ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.

ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶೇ 30ರಷ್ಟು ಕಡಿಮೆ ಸಮಯ ನಿಗದಿ ಮಾಡಬೇಕು. ಕೂಲಿ ಹೆಚ್ಚಳ ಮಾಡಬೇಕು, ಕಾರ್ಮಿಕರು ಮೃತಪಟ್ಟಲ್ಲಿ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ತೇಜೇಶ್ವರಿ ಕಾರ್ಮಿಕರಾದ ತಿಮ್ಮಪ್ಪ, ಸಣ್ಣಬೋಜಮ್ಮ, ನೀಲಮ್ಮ, ಸೋಮಕ್ಕ, ಉಮಕ್ಕ, ಎಲ್. ನಾಗರಾಜ್, ಕೋಶಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-44-507913833

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.