ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಬಯಲುಸೀಮೆಯ ಶೇಂಗಾಕ್ಕೆ ವಿದೇಶದಲ್ಲಿ ಬೇಡಿಕೆ

ಪೀನಟ್, ಬಟರ್, ಚಾಕೊಲೇಟ್, ಕೋಟಿಂಗ್ ಮತ್ತಿತರ ಸಿಹಿ ತಿನಿಸುಗಳಿಗೆ ಶೇಂಗಾಬೀಜದ ಪುಡಿ ಬಳಕೆ
Last Updated 17 ಡಿಸೆಂಬರ್ 2021, 5:30 IST
ಅಕ್ಷರ ಗಾತ್ರ

ಚಳ್ಳಕೆರೆ: ಶೇಂಗಾ ಬೀಜದ ಪುಡಿಯನ್ನು ಪೀನಟ್, ಬಟರ್, ಚಾಕೊಲೇಟ್, ಕೋಟಿಂಗ್ ಮತ್ತಿತರ ಸಿಹಿ ತಿನಿಸುಗಳಿಗೆ ಬಳಸುವುದರಿಂದ ಬಯಲುಸೀಮೆಯ ಶೇಂಗಾ ಬೀಜಕ್ಕೆ ಇಂಡೊನೇಷ್ಯಾ, ಸಿಂಗಾಪುರ, ಕಾಂಬೋಡಿಯಾ, ಶ್ರೀಲಂಕಾ, ಚೀನಾ, ಮಲೇಷ್ಯಾ ಮುಂತಾದೆಡೆ ಭಾರಿ ಬೇಡಿಕೆ ಇದೆ.

ಅತಿವೃಷ್ಟಿ-ಅನಾವೃಷ್ಟಿ ಕಾರಣ ಎಲ್ಲೆಡೆ ಶೇಂಗಾ ಬೆಳೆ ಕುಂಠಿತಗೊಂಡಿದೆ. ಇದರಿಂದಾಗಿ ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌ನಿಂದ ಇಲ್ಲಿನ ಬಿತ್ತನೆ ಶೇಂಗಾ ಬೀಜಕ್ಕೆ ಬೇಡಿಕೆ ಹೆಚ್ಚಿದೆ. ತಾಲ್ಲೂಕಿನಲ್ಲಿ ಸುರಿದ ಅಕಾಲಿಕ ಮಳೆಯ ಪರಿಣಾಮ ಈ ಬಾರಿ ಶೇಕಡ 25ರಷ್ಟು ಮಾತ್ರ ಶೇಂಗಾ ಬೆಳೆ ಬಂದಿದೆ. ಶೇಕಡ 75ರಷ್ಟು ಬೆಳೆ ಹಾನಿಯಾಗಿದೆ.

ಬೀದರ್, ಹುಬ್ಬಳ್ಳಿ, ಧಾರವಾಡ, ಆಂಧ್ರದ ಕದರಿ, ಅನಂತಪುರ, ತಾಡಪತ್ರಿ ಮುಂತಾದೆಡೆ ಮತ್ತು ಸ್ಥಳೀಯವಾಗಿ ಬೆಳೆದ ಅಲ್ಪ ಸ್ವಲ್ಪ ಪ್ರಮಾಣದ ಶೇಂಗಾ ಮಾರುಕಟ್ಟೆಗೆ ಬರುತ್ತಿದೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಶೇಂಗಾದ ಗುಣಮಟ್ಟ ಹಾಗೂ ಎಣ್ಣೆ ಅಂಶವನ್ನು ಆಧರಿಸಿ ಹೊರ ರಾಜ್ಯಗಳಿಂದ ಬಂದ ವರ್ತಕರು ಖರೀದಿಸುತ್ತಾರೆ. ಪ್ರತಿ ಕ್ವಿಂಟಲ್‍ಗೆ ಕನಿಷ್ಠ ₹ 3,500ರಿಂದ ₹ 6,500ರ ವರೆಗೆ ಮಾರಾಟವಾಗುತ್ತಿದೆ.

ಕಲ್ಯಾಣಿ(ಬುಡ್ಡು)ಗೆ ಬೇಡಿಕೆ: ವಾಣಿಜ್ಯ ಬಳಕೆಗೆ ಬೇಕಾಗುವ ಕಲ್ಯಾಣಿಯ ದುಂಡ್ಲು (ಬುಡ್ಡು) ಹಾಗೂ ಜೊಳ್ಳು(ಸಿಕ್ಲು) ಶೇಂಗಾಕ್ಕೆ ಹೊರ ದೇಶದಲ್ಲಿ ಬೇಡಿಕೆ ಇದೆ. ಶೇಂಗಾ ಗುಣಮಟ್ಟದ ಮೇಲೆ ಗ್ರೇಡ್ ಗುರುತಿಸಿ ಖರೀದಿ ನಡೆಯುತ್ತದೆ. ಮೊದಲ ಹಂತದಲ್ಲಿ ಬಿತ್ತನೆ ಬೀಜ, ಎರಡನೇ ಹಂದಲ್ಲಿ ಹೊರ ದೇಶಗಳಿಗೆ ರಫ್ತು ಮಾಡುವ ಬೀಜ ಮತ್ತು 3ನೇ ಹಂತದಲ್ಲಿ ಎಣ್ಣೆ ತಯಾರಿಕೆಯ ಬೀಜ ಹೀಗೆ ಪ್ರತ್ಯೇಕವಾಗಿ ವಿಂಗಡಿಸಿ ಅವುಗಳಿಗೆ ಬೆಲೆ ನಿಗದಿ ಮಾಡಲಾಗುತ್ತದೆ ಎನ್ನುತ್ತಾರೆ ವರ್ತಕ ತಿಪ್ಪೇಸ್ವಾಮಿ.

ಕೆಟ್ಟ, ಸಿಕ್ಲು ಬೀಜ ಹಾಗೂ ದುಂಡ್ಲು ಬೀಜಗಳನ್ನು ಸ್ಥಳೀಯ ಎಣ್ಣೆ ಗಿರಣಿಗೆ ಕಳುಹಿಸಿಕೊಡಲಾಗುತ್ತದೆ. ಮಾರುಕಟ್ಟೆಯಲ್ಲಿ ವಾರಕ್ಕೊಮ್ಮೆ ಶೇಂಗಾ ವಹಿವಾಟು ನಡೆಯುತ್ತದೆ. ಪ್ರತಿ ವಾರವೂ ಬೆಳೆಗೆ ತಕ್ಕಂತೆ ಬೆಲೆ ಏರಿಕೆ ಮಾಡಲಾಗುತ್ತದೆ ಎಂದು ಬಸವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT