ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸರ್ಕಾರದ ಅವಧಿಯಲ್ಲೇ ಶೇ 7.5 ಮೀಸಲಾತಿ: ಶ್ರೀರಾಮುಲು

ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಿ.ಶ್ರೀರಾಮುಲು ಭರವಸೆ
Last Updated 7 ಮೇ 2022, 5:20 IST
ಅಕ್ಷರ ಗಾತ್ರ

ನಾಯಕನಹಟ್ಟಿ: ‘ನಮ್ಮ ಸರ್ಕಾರದ ಅವಧಿಯಲ್ಲೇ ಪರಿಶಿಷ್ಟ ಪಂಗಡಕ್ಕೆ ಶೇ 7.5ರಷ್ಟು ಮೀಸಲಾತಿ ಘೋಷಿಸುತ್ತೇವೆ’ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಹೋಬಳಿಯ ಓಬಯ್ಯನಹಟ್ಟಿ ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು.

‘ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವಂತೆ ನೂರಾರು ಮನವಿಗಳು, ಹೋರಾಟಗಳು ನಡೆದಿವೆ. ಅದಕ್ಕೆ ನಮ್ಮ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಿಸಲು ಸಂಪುಟ ಉಪಸಮಿತಿ ರಚಿಸಿ ಹಲವು ಸಾಧಕ– ಬಾಧಕಗಳನ್ನು ಚರ್ಚಿಸಿ ಸಮುದಾಯದ ಹಿತಕ್ಕಾಗಿ ಪೂರಕವಾಗಿ ಸ್ಪಂದಿಸಿದೆ. ಆದರೆ ಮೀಸಲಾತಿ ವಿಚಾರದಲ್ಲಿ ಕೆಲವರು ಸರ್ಕಾರದ ನಡೆಯನ್ನುಟೀಕಿಸುತ್ತಿದ್ದಾರೆ. ಹಾಗೇ ಹಲವುಗೊಂದಲಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಜನರುತಲೆಕೆಡಿಸಿಕೊಳ್ಳಬಾರದು’ ಎಂದರು.

‘ಮೀಸಲಾತಿ ಜಾರಿ ವಿಷಯದಲ್ಲಿ ಸರ್ಕಾರ ದಿಟ್ಟ ಹೆಜ್ಜೆಯಿಟ್ಟಿದ್ದು, ಯಾರೂ ಗೊಂದಲಕ್ಕೆ ಒಳಗಾಗಬಾರದು. ಹಾಗೇ ಜಿಲ್ಲೆಯ ಬಹುದಿನಗಳ ಬೇಡಿಕೆ ಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸುವುದು ಮತ್ತು ತುಂಗಭದ್ರ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿಗಳನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ನಿಗಮಗಳಿಗೆ ತಾಕೀತು ಮಾಡಲಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಡೆಕಪಿಲೇ ಓಬಣ್ಣ, ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ.ಪಿ.ಎಂ. ಮಂಜುನಾಥ, ಇ.ರಾಮರೆಡ್ಡಿ, ಮುಖಂಡರಾದಎಂ.ವೈ.ಟಿ. ಸ್ವಾಮಿ, ಕಾಕಸೂರಯ್ಯ, ಸಿ.ಬಿ. ಮೋಹನ್, ಗ್ರಾಮಸ್ಥರಾದ ಪಟೇಲ್.ಪಿ.ಎಂ. ಮಹದೇವಣ್ಣ, ಪರಮೇಶ್ವರಪ್ಪ, ದಳವಾಯಪ್ಪ, ಬೋರಜ್ಜಯ್ಯ, ಮರಡಿಬೋರಯ್ಯ, ಅಜ್ಜಣ್ಣ, ಮಾರಯ್ಯ,ತಿಪ್ಪೇಸ್ವಾಮಿ, ಗಣೇಶಬೋರಯ್ಯ, ಗೊ. ಸಣ್ಣಬೋರಯ್ಯ, ಮಲ್ಲಯ್ಯ ಅವರು ಇದ್ದರು.

ಕ್ರಿಕೆಟ್ ಪಂದ್ಯಕ್ಕೆ ಚಾಲನೆ: ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಹಾಗೂ ಗ್ರಾಮದ ಯುವಕ ವಸಂತ ಕುಮಾರ್ ಅವರ ಶ್ರದ್ಧಾಂಜಲಿ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರಿಕೆಟ್‌ ಪಂದ್ಯಾವಳಿಯನ್ನು ಬಿ.ಶ್ರೀರಾಮುಲು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.

ಸೇತುವೆ ನಿರ್ಮಾಣಕ್ಕೆ ಮನವಿ

ಓಬಯ್ಯನಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಳ್ಳ ಇದ್ದು, ಸುಗಮ ಸಂಚಾರಕ್ಕೆ ಬೃಹತ್ ಸೇತುವೆ ಅವಶ್ಯಕತೆ ಇದೆ. ಪ್ರಸ್ತುತ ಇರುವ ಸೇತುವೆಯು ಎರಡು ದಶಕಗಳಿಂದ ಶಿಥಿಲಾವಸ್ಥೆ ತಲುಪಿದ್ದು, ಹೊಸದಾಗಿ ಸೇತುವೆ ನಿರ್ಮಾಣ ಮಾಡಲು ₹2 ಕೋಟಿ ನೀಡಬೇಕು. ಓಬಯ್ಯನಹಟ್ಟಿಯಿಂದ ರಾಮಸಾಗರ ಮಾರ್ಗದ ತಿಮ್ಮಪ್ಪಯ್ಯನಹಳ್ಳಿಗೆ ರಸ್ತೆ ನಿರ್ಮಿಸಲು ₹3 ಕೋಟಿ, ಸಿದ್ಧನಹಳ್ಳಕ್ಕೆ ತಡೆಗೋಡೆ ನಿರ್ಮಿಸಲು ₹2 ಕೋಟಿ ಹಾಗೂ ನೂತನ ಆಂಜನೇಯ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಮಂಜೂರು ಮಾಡಬೇಕು. ಗ್ರಾಮಕ್ಕೆ ಎಎನ್‌ಎಂ ಕೇಂದ್ರ, ಓಬಯ್ಯನಹಟ್ಟಿ ಗ್ರಾಮವನ್ನು ಪಂಚಾಯಿತಿ ಕೇಂದ್ರವಾಗಿ ಮೇಲ್ದರ್ಜೇಗೇರಿಸಬೇಕು’ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಶ್ರೀರಾಮುಲು ಮಾತನಾಡಿ, ‘ಗ್ರಾಮದ ಆಂಜನೇಯಸ್ವಾಮಿ ದೇಗುಲದ ರಾಜಗೋಪುರದ ಕ್ರಿಯಾಯೋಜನೆಯನ್ನು ತಯಾರಿಸಿ ಅಂದಾಜು ಮೊತ್ತವನ್ನು ತಿಳಿಸಿ, ಎರಡು ದಿನದಲ್ಲಿ ನನ್ನ ವೈಯಕ್ತಿಕ ಹಣ ತಲುಪಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಆಂಜನೇಯಸ್ವಾಮಿ ರಥದ ರಕ್ಷಣೆ ಹಾಗೂ ಅದನ್ನು ನಿಲ್ಲಿಸಲು ಭವನ ನಿರ್ಮಾಣಕ್ಕೆ ₹ 5ಲಕ್ಷ ಮಂಜೂರು ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT