ಸೋಮವಾರ, ಮೇ 23, 2022
21 °C

ಚಿತ್ರದುರ್ಗ: ಮದ್ಯಕ್ಕೆ ಹಣ ನೀಡದ ಪತ್ನಿ ಕೊಲೆ; ಪತಿಗೆ ನ್ಯಾಯಾಂಗ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಮದ್ಯ ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ತೋಟದ ಮನೆಯಲ್ಲಿ ಪತ್ನಿಯನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ತಾಲ್ಲೂಕಿನ ರೇಣುಕಾಪುರ ಗ್ರಾಮದ ಆರೋಪಿ ಶಿವಣ್ಣ (27) ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕುಡಿತದ ಚಟಕ್ಕೆ ಒಳಗಾಗಿದ್ದ ಆರೋಪಿ ಶಿವಣ್ಣ, ಸೋಮವಾರ ಕುಡಿಯಲು ಹಣ ನೀಡುವಂತೆ ಪತ್ನಿ ಫಾಲಾಕ್ಷ ಅವರನ್ನು ಪೀಡಿಸಿ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದರು. ಕೊಲೆಯನ್ನು ಮರೆಮಾಚಲು ತೋಟದ ಮನೆಯಲ್ಲಿಯೇ ಆಕೆಯ ಕುತ್ತಿಗೆಗೆ ಸೀರೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತೆ ಬಿಂಬಿಸಿದ್ದ. ಈ ಪ್ರಕರಣ ತಳಕು ಠಾಣೆಯಲ್ಲಿ ದಾಖಲಾಗಿತ್ತು.

ಉಪ ವಿಭಾಗದ ಡಿವೈಎಸ್ಪಿ ಕೆ.ವಿ.ಶ್ರೀಧರ್‌ ಮಾರ್ಗದರ್ಶನದಲ್ಲಿ, ರಚಿಸಲಾಗಿದ್ದ ನಿರೀಕ್ಷಕ ಎಸ್.ಜೆ. ತಿಪ್ಪೇಸ್ವಾಮಿ, ದಿನಕರ್, ಡಿ.ತಿಮ್ಮಪ್ಪ ಅವರ ತಂಡ ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.