ಚಿತ್ರದುರ್ಗ: ‘ಪ್ರಸ್ತುತ ದಿನಮಾನದಲ್ಲಿ ಮೊಬೈಲ್ ಎಂಬುದು ವ್ಯಸನವಾಗಿ ಪರಿವರ್ತನೆಯಾಗಿದೆ. ಇದರಿಂದ ಹೊರಬಂದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಿದೆ’ ಎಂದು ಹೊಳಲ್ಕೆರೆ ಒಂಟಿಕಂಬದ ಮಠದ ಉಸ್ತುವಾರಿ ತಿಪ್ಪೇರುದ್ರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶಿವಶರಣ ಕುರುಬ ಗೊಲ್ಲಾಳೇಶ್ವರ ಶರಣೋತ್ಸವದಲ್ಲಿ ಮಾತನಾಡಿದ ಅವರು, ‘ಯುವ ತಲೆಮಾರು ಹಲವು ವ್ಯಸನಗಳಿಗೆ ಒಳಗಾಗುತ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಮೊಬೈಲ್ ಹಂಬಲ ಅತಿಯಾಗಿ ಕಾಡುತ್ತಿದೆ’ ಎಂದರು.

‘ಕುರಿ ಕಾಯುವ ಹುಡುಗ ಕುರಿಯ ಹಿಕ್ಕೆಯಲ್ಲಿ ಶಿವಲಿಂಗ ಕಾಣುವಂಥ ಅಗಾಧ ನಂಬಿಕೆಯನ್ನು ಹೊಂದಿ ತನ್ನ ಕಾಯಕದ ಮೂಲಕ ದೇವರನ್ನು ಕಂಡು ಶಿವಶರಣ ಗೊಲ್ಲಾಳೇಶ್ವರರು ಆದರು. ಇವರು ಇಂದಿನ ತಲೆಮಾರಿಗೆ ಮಾದರಿಯಾಗಿದ್ದಾರೆ’ ಎಂದು ತಿಳಿಸಿದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಸಮಾಜೋಧಾರ್ಮಿಕ ಚಳವಳಿ ದೇಶದಲ್ಲಿ ಜನಾಕರ್ಷಣೆಗೆ ಒಳಗಾಗಿತ್ತು. ವರ್ಣ, ವರ್ಗ, ಜಾತಿ, ಲಿಂಗಗಳ ವ್ಯವಸ್ಥೆಯ ಮಿತಿಯನ್ನು ಮೀರಿ ರಾಜ-ಮಹಾರಾಜರು, ಕವಿಗಳು, ಕಲಾವಿದರು, ಸಾಧಕರು, ಸಂತರು ಕಲ್ಯಾಣದ ಕಡೆಗೆ ಆಕರ್ಷಿತರಾದರು’ ಎಂದು ಹೇಳಿದರು.

‘ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಪರಸ್ಪರ ಹಂಚಿಕೊಂಡರು. ತಮ್ಮ ಆಲೋಚನೆಗಳನ್ನು ವಿವೇಚನೆಯ ಓರೆಗೆ ಹಚ್ಚಿದರು. ಒಬ್ಬರು ಮತ್ತೊಬ್ಬರಿಂದ ಪ್ರಭಾವಿತರಾದರು. ಅಲಕ್ಷಿತರು, ಅನಕ್ಷರಸ್ಥರು ವಿಚಾರ ಕ್ರಾಂತಿಯ ಪ್ರಭಾವಕ್ಕೊಳಗಾದರು. ಅಂಥವರಲ್ಲಿ ಕುರಿ ಕಾಯುವ ಹುಡುಗ ಕುರುಬರ ಗೊಲ್ಲಾಳೇಶ್ವರರು ಒಬ್ಬರಾಗಿದ್ದಾರೆ’ ಎಂದರು.

ಬೃಹನ್ಮಠ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಎಂ.ಜಿ.ರಾಜೇಶ್, ಜಮುರಾ ಕಲಾವಿದ ಉಮೇಶ್ ಪತ್ತಾರ್, ಉಪನ್ಯಾಸಕ ಪಿ.ಉಮಾಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.