ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂನ್ಯಪೀಠ ಅಲಂಕರಿಸಿದ ಮುರಿಗಾಶ್ರೀ ಭಾವಚಿತ್ರ

ಮುರುಘಾ ಶರಣರ ಅನುಪಸ್ಥಿತಿಯಲ್ಲಿ ನೆರವೇರಿದ ಸಂಪ್ರದಾಯ
Last Updated 6 ಅಕ್ಟೋಬರ್ 2022, 21:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮುರುಘಾಮಠದ ಶೂನ್ಯಪೀಠದಲ್ಲಿ ಗುರುವಾರ ಮುರಿಗಾ ಶಾಂತವೀರ ಸ್ವಾಮೀಜಿ‌ ಭಾವಚಿತ್ರ ಇಟ್ಟು ಸಾಂಪ್ರದಾಯಿಕವಾಗಿ ಶೂನ್ಯ ಪೀಠಾರೋಹಣ ನೆರವೇರಿಸಲಾಯಿತು.

ಶರಣ ಸಂಸ್ಕೃತಿ ಉತ್ಸವದಲ್ಲಿ ಮಠದ ಪೀಠಾಧ್ಯಕ್ಷರು ಶೂನ್ಯಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನ ನೀಡುವುದು ವಾಡಿಕೆ. ಲೈಂಗಿಕ ಕಿರುಕುಳ ಆರೋಪದಡಿ ಶಿವಮೂರ್ತಿ ಮುರುಘಾ ಶರಣರು ಬಂಧನದಲ್ಲಿರುವುದರಿಂದ ಮುರಿಗಾ ಶಾಂತವೀರ ಸ್ವಾಮೀಜಿಯವರ ಭಾವಚಿತ್ರ, ಪಾದುಕೆಗಳನ್ನು ಇಟ್ಟು ಪೀಠಾರೋಹಣ ವಿಧಿ–ವಿಧಾನ ನಡೆಸಲಾಯಿತು.

ಮಠದ ಪ್ರಾಂಗಣದಲ್ಲಿರುವ ಪೀಠವನ್ನು ಪುಷ್ಪಗಳಿಂದ ಅಲಂಕರಿಸ ಲಾಗಿತ್ತು. ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮುರಿಗಾಶ್ರೀ ಕಾರ್ಯಕ್ರಮ ನಡೆಸಲಾಯಿತು. ಮಠದ ಪ್ರಾಂಗಣದಲ್ಲಿ ಸೇರಿದ್ದ ಭಕ್ತರು ಜಯಘೋಷ ಮೊಳಗಿಸಿ ಭಕ್ತಿ ಸಮರ್ಪಿಸಿದರು.

ಮಠದ ಪೀಠಾಧ್ಯಕ್ಷರು ಚಿನ್ನದ ಕಿರೀಟ, ಬಂಗಾರದ ಪಾದುಕೆ ಹಾಗೂ ಆಭರಣ ಧರಿಸಿ ರತ್ನಖಚಿತ ಸಿಂಹಾಸನದ ಪೀಠಾರೋಹಣ ಮಾಡುವುದು ವಾಡಿಕೆಯಾಗಿತ್ತು. ಈ ಆಡಂಬರದ ಆಚರಣೆಯನ್ನು ಸರಳೀಕರಿಸಿದ್ದ ಶಿವಮೂರ್ತಿ ಮುರುಘಾ ಶರಣರು ರುದ್ರಾಕ್ಷಿ ಕಿರೀಟ, ಮರದ ಪಾದುಕೆ ಧರಿಸಿ ಮರದ ಆಸನದ ಮೇಲೆ ಕುಳಿತುಕೊಳ್ಳುವ ಪರಂಪರೆ ಆರಂಭಿಸಿದ್ದರು. ಪೀಠದ ಮೇಲೆ ಭಾವಚಿತ್ರ ಇಟ್ಟು ಕೈಂಕರ್ಯ ಪೂರೈಸಿದ್ದು ಇದೇ ಮೊದಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT