ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ಬಸವತತ್ವ ಪ್ರಚಾರ ಸ್ವಾಗತಾರ್ಹ: ಡಾ.ಶಿವಮೂರ್ತಿ ಮುರುಘಾ ಶರಣರು

ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು
Last Updated 4 ಜುಲೈ 2022, 13:58 IST
ಅಕ್ಷರ ಗಾತ್ರ

ಚಿತ್ರದುರ್ಗ: ವಚನಕಾರರು ನೀಡಿದ ಕೊಡುಗೆ ಹಾಗೂ ಅವರು ತಂದಂತಹ ಸಮಾಜಮುಖಿ ಪರಿವರ್ತನೆಗಳಿಗೆ ವಿಶ್ವಮಾನ್ಯತೆ ಇದೆ. ಬಸವತತ್ವಗಳನ್ನು ವಿದೇಶದಲ್ಲಿ ಪ್ರಚಾರ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಅಮೆರಿಕದ ಹ್ಯೂಸ್ಟನ್‌ನಲ್ಲಿ ನಡೆದ 45ನೇ ಶರಣ ಸಮನ್ವಯ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಇತಿಹಾಸ ಗಮನಿಸಿದರೆ ಆಗಾಗ ಕ್ರಾಂತಿಗಳು ನಡೆದಿರುವುದು ತಿಳಿಯುತ್ತದೆ. ಮಾನವನ ವಿಚಾರದೊಂದಿಗೆ ಸಾಮಾಜಿಕ ಸ್ಥಿತಿಯನ್ನು ಪರಿವರ್ತಿಸಬಲ್ಲ ಶಕ್ತಿ ಕ್ರಾಂತಿಗೆ ಇದೆ. ಇಂತಹ ಕ್ರಾಂತಿಯಿಂದಲೇ ಮಾನವ ಜಗತ್ತು ಸುಧಾರಣೆ ಕಂಡಿದೆ. ಸುಸಂಸ್ಕೃತ ಹಂತವನ್ನು ತಲುಪಲು ಸಾಧ್ಯವಾಗಿದೆ’ ಎಂದರು.

‘ಬಸವಾದಿ ಶರಣರು ಸಂಸಾರವನ್ನು ತ್ಯಾಜ್ಯವೆಂದು ಭಾವಿಸಲಿಲ್ಲ. ಬದಲಿಗೆ ಸಂಸಾರವೂ ಪೂಜ್ಯವೆಂದು ಭಾವಿಸಿದ್ದರು. ಶುದ್ಧರಾದವರು ಬದ್ಧರಾಗುತ್ತಾರೆ ಎಂಬುದು ಅವರ ನಂಬಿಕೆ. ಶುದ್ಧತೆ ಮತ್ತು ಬದ್ಧತೆ ಇದ್ದಾಗ ಪ್ರಬುದ್ಧತೆ ಬರುತ್ತದೆ. ಶುದ್ಧೀಕರಣವೆಂದರೆ, ಶರೀರ, ಇಂದ್ರಿಯ ಮತ್ತು ಬುದ್ಧಿಯ ವಿಕಾಸ. ಶುದ್ಧೀಕರಣಕ್ಕೆ ಬಳಸುವ ಏಣಿಯೇ ಶಿವಯೋಗ’ ಎಂದು ಹೇಳಿದರು.

‘ಜೀವನ ಯಾತ್ರೆಯಲ್ಲಿ ಏರಿಳಿತ ಸಮಾನ್ಯ. ಅದನ್ನು ಸಮತೋಲನಗೊಳಿಸಿದಾಗ ಸಮಾಧಾನ. ಶುದ್ಧೀಕರಣ ಮತ್ತು ಉದಾತ್ತೀಕರಣ ಎರಡೂ ಕೂಡಿಕೊಂಡು ಬದುಕನ್ನು ಉನ್ನತೀಕರಿಸುತ್ತವೆ. ಶಿವಶರಣರು ಚಿಕ್ಕ ಮನೆಗಳಲ್ಲಿ ವಾಸಿಸುತ್ತಿದ್ದರು. ಅವರು ನಿರ್ವಹಿಸುತ್ತಿದ್ದ ಕಾಯಕಗಳು ಸಣ್ಣವಾಗಿದ್ದವು. ಆದರೆ, ದೊಡ್ಡ ಆದರ್ಶ ಇಟ್ಟುಕೊಂಡಿದ್ದರು. ಆದರ್ಶವಿಲ್ಲದ ಬದುಕು ಉನ್ನತಿಗೆ ಏರಲಾರದು’ ಎಂದರು.

ವಿಎಸ್‍ಎನ್‍ಎ ಸಂಘಟನೆಯ ಅಧ್ಯಕ್ಷ ಹರೀಶ್ ಹಿರೇಮಠ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT