ನಾಯಕನಹಟ್ಟಿ: ಸೌಹಾರ್ದತೆಗೆ ಹೆಸರಾಗಿರುವ ನಾಯಕನಹಟ್ಟಿ ಪಟ್ಟಣದಲ್ಲಿ ಜೂನ್ 26ರಂದು ಸಾಂಪ್ರದಾಯಿಕವಾಗಿ ಮೊಹರಂ ಆಚರಿಸಲು ಗ್ರಾಮಸ್ಥರು ಮಂಗಳವಾರ ತೀರ್ಮಾನಿಸಿದ್ದಾರೆ.

ಪಟ್ಟಣದಲ್ಲಿ ತಲೆತಲಾಂತರದಿಂದ ಮೊಹರಂ ಹಬ್ಬವನ್ನು ಯಾವ ಭಿನ್ನಾಭಿಪ್ರಾಯಗಳಿಲ್ಲದೆ ಸರ್ವಧರ್ಮೀಯರು ಸೇರಿ ಅದ್ದೂರಿಯಾಗಿ ಆಚರಿಸುತ್ತಿದ್ದರು. ಎಲ್ಲ ಹಬ್ಬಗಳು, ತಿಪ್ಪೇರುದ್ರಸ್ವಾಮಿ ಮಹಾಜಾತ್ರೆಯಂತೆ ಮೊಹರಂ ಹಬ್ಬವೂ ವಿಶೇಷ ಸ್ಥಾನ ಪಡೆದಿತ್ತು. ತಿಪ್ಪೇರುದ್ರಸ್ವಾಮಿ ಒಳಮಠದ ಮಾರ್ಗದಲ್ಲಿ ಮೊಹರಂ ಗುಡಿಯನ್ನೂ ಕಟ್ಟಲಾಗಿತ್ತು. ಆದರೆ 22 ವರ್ಷಗಳಿಂದ ಕ್ಷುಲ್ಲಕ ಕಾರಣಗಳಿಂದ ಹಬ್ಬ ಸ್ಥಗಿತವಾಗಿತ್ತು. ನಂತರ ಪೀರಲ ಗುಡಿಯೂ ಶಿಥಿಲಾವಸ್ಥೆ ತಲುಪಿತ್ತು. ಈಚೆಗೆ ಸುರಿದ ರಭಸವಾದ ಮಳೆಗೆ ಗುಡಿ ಬಿದ್ದಿತ್ತು.

ಇದರಿಂದ ಎಚ್ಚೆತ್ತುಕೊಂಡ ದೈವಸ್ಥರು ಮತ್ತು ಗ್ರಾಮಸ್ಥರು, ಹಿಂದಿನಿಂದ ನಡೆದುಬಂದ ಮೊಹರಂ ಅನ್ನು ಅರ್ಥಗರ್ಭಿತವಾಗಿ ಆಚರಿಸಲು ನಿರ್ಧರಿಸಿದ್ದರು. ಗ್ರಾಮಕ್ಕೆ ಉತ್ತಮ ಮಳೆ–ಬೆಳೆ ಆಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯಿಂದ ಮತ್ತೆ ಹಬ್ಬ ಆಚರಣೆಗೆ ಮುಂದಾಗಿದ್ದಾರೆ.

‘ನೆಲಸಮವಾಗಿರುವ ದೇಗುಲವನ್ನು ಅದೇ ಜಾಗದಲ್ಲಿ ಪುನರ್ ನಿರ್ಮಿಸಬೇಕು. ಈ ವರ್ಷ ಹೊಸ ಗುಡಿಯಲ್ಲಿ ಮೊಹರಂ ಆಚರಿಸಬೇಕು ಎಂದು ತೀರ್ಮಾನಿಸಿದ್ದಾರೆ. ದಾನಿಗಳ ನೆರವಿನಿಂದ ಪೀರಲಗುಡಿ ನಿರ್ಮಿಸಿ 26ರಂದು ಮೊಹರಂ ಆಚರಿಸಬೇಕು ಎಂದು ಸಂಕಲ್ಪ ಮಾಡಲಾಗಿದೆ’ ಎಂದು ಮುಖಂಡರು ಹೇಳಿದ್ದಾರೆ.

ಗ್ರಾಮಸ್ಥರಾದ ಕೆ.ಎನ್.ತಿಪ್ಪೇರುದ್ರಪ್ಪ, ಜಿ.ಎಸ್.ಪ್ರಭುಸ್ವಾಮಿ, ಗೌಡರ ಎನ್.ಪಿ.ರುದ್ರಣ್ಣ, ಜೆ.ಆರ್.ರವಿಕುಮಾರ್, ದೊರೆತಿಪ್ಪೇಸ್ವಾಮಿ, ಓಂಪ್ರಕಾಶ್, ಟಿ.ರುದ್ರಮುನಿ, ಎನ್.ಬಿ.ಮುನಿಯಪ್ಪ, ಗಂಗಪ್ಪ, ರುದ್ರಮುನಿ, ಡಿ.ಬಿ.ಯೋಗೀಶ್, ತ್ರಿಶೂಲ್ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-44-173435392

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.