ಸೋಮವಾರ, ಅಕ್ಟೋಬರ್ 14, 2019
23 °C

ಚಿತ್ರದುರ್ಗ: ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಕಸ ಗುಡಿಸಿದ ಕಟೀಲ್‌

Published:
Updated:

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚಾರಣೆ ಅಂಗವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಪೊರಕೆ ಹಿಡಿದು ಸೋಮವಾರ ಕಸ ಗುಡಿಸಿದರು.

ಜಿಲ್ಲಾ ಆಸ್ಪತ್ರೆಗೆ ಬೆಳಿಗ್ಗೆ 8ಕ್ಕೆ ಭೇಟಿ ನೀಡಿದ ಅವರು ವಾರ್ಡ್ಗಳನ್ನು ಪರಿಶೀಲಿಸಿದರು. ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾದ ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಕಟೀಲು ಅವರು ಕೈಗವಸು ಹಾಕಿಕೊಂಡು ಪೊರಕೆ ಹಿಡಿಯುತ್ತಿದ್ದಂತೆ ಬಿಜೆಪಿ ಮುಖಂಡರು ಸ್ವಚ್ಛತೆಗೆ ಮುಂದಾದರು. ಸಂಸದ ಎ. ನಾರಾಯಣಸ್ವಾಮಿ ಹಾಗೂ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಕಸಗುಡಿಸಿದರು. ಚರಂಡಿ ಪಕ್ಕದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆಗೆದು ಬುಟ್ಟಿಗೆ ತುಂಬಿದರು. ಬಳಿಕ ಅದನ್ನು ಕಸದ ವಾಹನಕ್ಕೆ ಎತ್ತಿಹಾಕಿ ಸ್ವಚ್ಚತೆಯ ಸಂದೇಶ ನೀಡಿದರು. ಪೌರಕರ್ಮಿಕರ ಜೊತೆ ಉಪಾಹಾರ ಸೇವಿಸಿದರು.

Post Comments (+)