ನಾರಾಯಣ ಗುರು ಸಮಾಜದ ಉದ್ಧಾರಕ: ರೇಣುಕಾನಂದ ಸ್ವಾಮೀಜಿ

7

ನಾರಾಯಣ ಗುರು ಸಮಾಜದ ಉದ್ಧಾರಕ: ರೇಣುಕಾನಂದ ಸ್ವಾಮೀಜಿ

Published:
Updated:
Deccan Herald

ಹೊಸದುರ್ಗ: ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಸಮಾಜದ ಉದ್ಧಾರಕ್ಕೆ ಶ್ರಮಿಸಿದ ಮಹಾನ್‌ ದಾರ್ಶನಿಕ ಎಂದು ನಿಟ್ಟೂರು ನಾರಾಯಣ ಗುರು ಮಹಾಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಪಾಡುರಂಗಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯುತ್ಸವ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಇಲ್ಲಿನ ಈಡಿಗ ಸಮಾಜದ ಮುಖಂಡರು ವಿಶಿಷ್ಟ ರೀತಿಯಲ್ಲಿ ಈ ಜಯಂತ್ಯುತ್ಸವ ಹಮ್ಮಿಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಈ ಪರಂಪರೆ ನಿರಂತರವಾಗಿ ಮುಂದುವರೆಯಬೇಕು. ಸಮಾಜದ ಅಭಿವೃದ್ಧಿಗೆ ಪಕ್ಷಭೇದ ಮರೆತು ಸಂಘಟಿತರಾಗಬೇಕು. ಸಮುದಾಯದ ಅಭಿವೃದ್ಧಿಗೆ ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಬೇಕು. ಆ ಮೂಲಕ ನಾರಾಯಣ ಗುರು ಕಂಡಿದ್ದ ಕನಸನ್ನು ನನಸಾಗಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಮಾತನಾಡಿ, ತಾಲ್ಲೂಕಿನಲ್ಲಿ ಪುಟ್ಟ ಸಮಾಜವಾಗಿರುವ ಈಡಿಗರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನಗೆ ಬರುವ ಅನುದಾನದಲ್ಲಿ ಈಡಿಗ ಸಮುದಾಯಕ್ಕೂ ಹಣ ಮೀಸಲಿಡುತ್ತೇನೆ. ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು.

ದೇವಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್‌.ಮಹೇಶ್‌ ಉಪನ್ಯಾಸ ನೀಡಿದರು.

ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಟಿ.ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಸದಸ್ಯೆ ಓಬಳಮ್ಮ ಬೈಲಪ್ಪ, ಮೆಂಗಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ವಿಜಯಲಕ್ಷ್ಮೀ ರಂಗಪ್ಪ, ಕಗ್ಗಲಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಟಿ.ಅಜ್ಜಪ್ಪ, ಈಡಿಗ ಸಮಾಜದ ಮುಖಂಡರಾದ ಕೆ.ಎನ್‌.ರಮೇಶ್‌, ಹನುಮಂತಪ್ಪ, ವೆಂಕಟೇಶ್‌, ರಂಗಪ್ಪ, ಮಂಜುನಾಥ್‌, ಅಶೋಕ್‌, ಅಣ್ಣಪ್ಪ, ಕರಿಯಪ್ಪ, ರವಿಕುಮಾರ್‌, ವೆಂಕಟೇಶ್‌, ಶ್ರೀನಿವಾಸ್‌, ರಾಮಲಿಂಗಪ್ಪ, ರಾಮಣ್ಣ, ಕೃಷ್ಣಮೂರ್ತಿ ಹಾಜರಿದ್ದರು.

ಸಮಾರಂಭಕ್ಕೂ ಮೊದಲು ಪಟ್ಟಣದ ವೀರಭದ್ರಸ್ವಾಮಿ ದೇಗುಲದಿಂದ ಪಾಡುರಂಗಸ್ವಾಮಿ ಸಮುದಾಯ ಭವನದ ವರೆಗೂ ಅಲಂಕೃತ ಬ್ರಹ್ಮಶ್ರೀ ನಾರಾಯಣ ಗುರು ಭಾವಚಿತ್ರ ಹಾಗೂ ರೇಣುಕಾನಂದ ಸ್ವಾಮೀಜಿ ಅವರ ಸಾರೋಟಿನ್‌ನ ಅದ್ದೂರಿ ಮೆರವಣಿಗೆ ನಡೆಯಿತು. ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಮಠದ ಅಭಿವೃದ್ಧಿಗೆ ಕೈಜೋಡಿಸಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿಟ್ಟೂರಿನಲ್ಲಿ ಇರುವ ಈಡಿಗ ಸಮಾಜದ ನಾರಾಯಣ ಗುರು ಶ್ರೀಮಠದ ಅಭಿವೃದ್ಧಿಗೆ ಭಕ್ತರು ಸಹಕಾರ ನೀಡಬೇಕು. ತಾವು ಬೆಳೆದ ಧಾನ್ಯದಲ್ಲಿ ಸ್ವಲ್ಪ ಪ್ರಮಾಣವನ್ನು ಮಠಕ್ಕೆ ಅರ್ಪಿಸಬೇಕು. ಇದರಿಂದ ಶ್ರೀಮಠದಲ್ಲಿ ಶಿಕ್ಷಣ ಪಡೆಯುವ ಬಡಮಕ್ಕಳ ಅನ್ನದಾಸೋಹಕ್ಕೆ ಸಹಕಾರಿ ಆಗುತ್ತದೆ. ರಾಜ್ಯದ ಬೇರೆ, ಬೇರೆ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುವಂತೆ, ವರ್ಷಕ್ಕೆ ಒಮ್ಮೆಯಾದರೂ ಭಕ್ತರು ನಮ್ಮ ಮಠಕ್ಕೆ ಭೇಟಿ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರೇಣುಕಾನಂದ ಸ್ವಾಮೀಜಿ ಸಲಹೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !