ನಾಯಕನಹಟ್ಟಿ: ಪಟ್ಟಣದ ಹಟ್ಟಿ ಮಲ್ಲಪ್ಪನಾಯಕ ವೃತ್ತದ ಬಳಿ ಇರುವ ತಿಪ್ಪೇಸ್ವಾಮಿ ಹೋಟೆಲ್ ಮುಂಭಾಗದಲ್ಲಿ ಬುಧವಾರ ಸಂಜೆ ವ್ಯಕ್ತಿಯೊಬ್ಬರು ತಮ್ಮ ಬೈಕ್ನ ಬ್ಯಾಗ್ನಲ್ಲಿ ಇಟ್ಟಿದ್ದ ₹ 4 ಲಕ್ಷವನ್ನು ಕಳ್ಳನೊಬ್ಬ ದೋಚಿ ಪರಾರಿಯಾಗಿದ್ದಾನೆ.

ಮುಷ್ಠಲಗುಮ್ಮಿ ವೀರಭದ್ರೇಶ್ವರ ಸ್ವಾಮಿ ಪ್ರೌಢಶಾಲೆಯ ಶಿಕ್ಷಕ, ಅಬ್ಬೇನಹಳ್ಳಿ ಗ್ರಾಮದ ಸಿ.ಎನ್. ಉಮೇಶ್ ಹಣ ಕಳೆದುಕೊಂಡವರು.

ಉಮೇಶ್ ಅವರ ಅಕ್ಕನ ಮಗನ ಮದುವೆ ಖರ್ಚಿಗಾಗಿ ಬುಧವಾರ ಬೆಳಿಗ್ಗೆ ಬ್ಯಾಂಕ್ನಿಂದ ₹ 4 ಲಕ್ಷವನ್ನು ಬಿಡಿಸಿಕೊಂಡು ಬೈಕ್ನ ಸೈಡ್ ಬ್ಯಾಗ್ನಲ್ಲಿ ಇಟ್ಟಿದ್ದಾರೆ. ನಂತರ ಹಟ್ಟಿ ಮಲ್ಲಪ್ಪನಾಯಕ ವೃತದಲ್ಲಿರುವ ತಿಪ್ಪೇಸ್ವಾಮಿ ಹೋಟೆಲ್ಗೆ ಬಂದಿದ್ದಾರೆ. ಹೋಟೆಲ್ ಹೊರಗಡೆ ಬೈಕ್ ನಿಲ್ಲಿಸಿ ಉಪಾಹಾರ ಸೇವಿಸಿ ಮರಳಿ ಬಂದು ಬೈಕ್ ನೋಡಿದಾಗ ಹಣ ಇರುವ ಚೀಲ ಕಾಣೆಯಾಗಿತ್ತು.

ನಾಯಕನ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಪಿಎಸ್ಐ ಜಿ. ಪಾಂಡುರಂಗ ಪಟ್ಟಣದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಕಳ್ಳನ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.