ನಾಯಕನಹಟ್ಟಿ: ಪಟ್ಟಣದ 14ನೇ ವಾರ್ಡ್ನ ಬಿಜೆಪಿ ಸದಸ್ಯ ಎನ್. ಮಹಾಂತಣ್ಣ ಅವರನ್ನು ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಚಿತ್ರದುರ್ಗದ ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಪಟ್ಟಣ ಪಂಚಾಯಿತಿಯ ವಸತಿ ಯೋಜನೆಯ ಸೌಲಭ್ಯಗಳನ್ನು ಕುಟುಂಬ ಸದಸ್ಯರಿಗೇ ನೀಡುವಲ್ಲಿ ಪ್ರಭಾವ ಬಳಸಿರುವ ಆರೋಪ ಸಾಬೀತಾದ ಕಾರಣ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ.

ಎನ್. ಮಹಾಂತಣ್ಣ 13ನೇ ವಾರ್ಡ್ನ ಸದಸ್ಯರಾಗಿದ್ದಾಗ 2015–16ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ತನ್ನ ಕುಟುಂಬದ ಸದಸ್ಯರಿಗೆ ಒಟ್ಟು ಮೂರು ಮನೆಗಳನ್ನು ನೀಡಿ ಕಾರ್ಯಾದೇಶ ಪಡೆದಿದ್ದರು. ಕುಟುಂಬದ ಇಬ್ಬರು ಮಹಿಳಾ ಸದಸ್ಯರ ಹೆಸರಿನಲ್ಲಿ ಮನೆ ನಿರ್ಮಿಸಿ ವಸತಿ ಯೋಜನೆಯ ತಲಾ ₹ 2.63 ಲಕ್ಷ ಸಹಾಯಧನವನ್ನು ಪಡೆದಿದ್ದರು. ಆದರೆ, ಆ ಮಹಿಳಾ ಸದಸ್ಯರು ಎಪಿಎಲ್ ಕಾರ್ಡ್ ಹೊಂದಿದವರಾಗಿದ್ದು, ಆದಾಯ ತೆರಿಗೆದಾರರಾಗಿದ್ದರು. ಸರ್ಕಾರದ ವಸತಿ ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ಸುಳ್ಳು ದಾಖಲೆ ನೀಡಿ ಮನೆ ನಿರ್ಮಿಸಿಕೊಂಡು ಮಹಾಂತಣ್ಣ ಅದೇ ಮನೆಯಲ್ಲಿ ವಾಸವಿದ್ದರು.

ವಸತಿ ಯೋಜನೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ 9ನೇ ವಾರ್ಡಿನ ಸದಸ್ಯ ಜೆ.ಆರ್. ರವಿಕುಮಾರ್ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಎನ್. ಮಹಾಂತಣ್ಣ ಅವರ ಹಾಲಿ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು 2025ರಲ್ಲಿ ಚಿತ್ರದುರ್ಗದ ಉಪ ವಿಭಾಗಾಧಿಕಾರಿಯವರ ನ್ಯಾಯಾಲಯದಲ್ಲಿ ಚುನಾವಣಾ ದೂರು ದಾಖಲಿಸಿದ್ದರು. ಆದರೆ, ಅಂದಿನ ಉಪವಿಭಾಗಾಧಿಕಾರಿ ಅರ್ಜಿಯನ್ನು ವಜಾಗೊಳಿಸಿದ್ದರು.

ಆದರೆ, ಅವರು ಉಪವಿಭಾಗಾಧಿಕಾರಿಯವರ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ 60 ದಿನಗಳಲ್ಲಿ ಸದಸ್ಯ ಸ್ಥಾನವನ್ನು ಅನರ್ಹಹೊಳಿಸಿ ಆದೇಶ ಹೊರಡಿಸುವಂತೆ ಚಿತ್ರದುರ್ಗದ ಉಪವಿಭಾಗಾಧಿಕಾರಿಗೆ ಸೂಚಿಸಿತ್ತು. ಹಾಗಾಗಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಉಪವಿಭಾಗಧಿಕಾರಿ ಕೆ.ಜೆ.ಕಾಂತರಾಜ ಅವರು ಅಂತಿಮವಾಗಿ ಎನ್.ಮಹಾಂತಣ್ಣ ಅವರ ಪಟ್ಟಣ ಪಂಚಾಯಿತಿ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-44-2043708348

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.