ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೈವ ದೊಡ್ಲ ಮಾರಿಕಾಂಬಾ ದೇವಿಯ ಜಾತ್ರೆ ಮಂಗಳವಾರ ಮತ್ತು ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಮಂಗಳವಾರ ಬೆಳಿಗ್ಗೆ ಗಂಗಾಪೂಜೆ ನಂತರ, ಸಂಜೆ ಗ್ರಾಮಕ್ಕೆ ಕರೆತಂದು ಗುಡಿದುಂಬಿಸಲಾಯಿತು. ಸಮೀಪದ ನಾಯಕನಹಟ್ಟಿ, ಗೌರಿಪುರ, ಮಹದೇವಪುರ, ಗಜ್ಜುಗಾನಹಳ್ಳಿ, ಕೆರೆಯಾಗಳಹಳ್ಳಿ, ನನ್ನಿವಾಳ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಎತ್ತಿನಗಾಡಿಗಳಲ್ಲಿ ಬಂದು ಹರಕೆ ಪೂರೈಸಿದರು. ಭಕ್ತರು ತಮ್ಮ ಕುರಿ, ಮೇಕೆ, ಹಸು ಸೇರಿದಂತೆ ಜಾನುವಾರುಗಳನ್ನು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿಸಿದರು.

ಯುಗಾದಿ ಹಬ್ಬ ಆಚರಣೆ: ಎನ್.ದೇವರಹಳ್ಳಿ ಗ್ರಾಮದ ಸುತ್ತಲಿನ ಗ್ರಾಮಗಳ ಜನರು ಈ ಜಾತ್ರೆಯ ಸಮಯದಲ್ಲಿ ಯುಗಾದಿ ಹಬ್ಬ ಆಚರಿಸಿದರು. ದೇವರಿಗೆ ಬೇವು–ಬೆಲ್ಲ ಅರ್ಪಿಸಿ, ನಂತರ ಪರಸ್ಪರ ಹಂಚಿಕೊಂಡು ತಿಂದು ಹಬ್ಬ ಆಚರಿಸಿದರು.

‘ಈ ಹಿಂದೆ ಗ್ರಾಮದಲ್ಲಿ ಯುಗಾದಿ ಆಚರಣೆ ವೇಳೆ ದೇವಿಗೆ ಪ್ರಾಶಸ್ತ್ಯ ನೀಡಿರಲಿಲ್ಲ. ಕುಪಿತಗೊಂಡು ದೇವಿ ಗ್ರಾಮಕ್ಕೆ ಶಾಶ್ವತ ಬರಗಾಲ ಬರಲಿ ಎಂದು ಶಾಪ ನೀಡಿದ್ದಳು. ಇದರಿಂದ ಗ್ರಾಮ ಶಾಶ್ವತ ಬರಗಾಲಕ್ಕೆ ತುತ್ತಾಗಿತ್ತು. ರೋಗರುಜಿನ ಕಾಣಿಸಿಕೊಂಡು ಭಾರಿ ಸಮಸ್ಯೆಯಾಗಿತ್ತು. ಮೊದಲು ದೇವಿಯ ಜಾತ್ರೆ ಮಾಡಿ ನಂತರ ಯುಗಾದಿ ಹಬ್ಬ ಆಚರಿಸಲಾಗುವುದು ಎಂದು ದೇವರಿಗೆ ಮುಡಿಪು ಕಟ್ಟಿದ ಮೇಲೆ ಎಲ್ಲ ಸಮಸ್ಯೆಗಳು ಬಗೆಹರಿದವು. ಅಂದಿನಿಂದ ದೇವಿ ಉತ್ಸವದ ನಂತರವೇ ಯುಗಾದಿ ಹಬ್ಬ ಆಚರಣೆ ರೂಢಿಗೆ ಬಂದಿತು’ ಎಂದು ದೇವಾಲಯದ ಅರ್ಚಕರು, ಗ್ರಾಮದ ಹಿರಿಯರು ಹೇಳುತ್ತಾರೆ.

ವಹಿವಾಟು ಜೋರು: ಗ್ರಾಮದಲ್ಲಿ ಮೂರು ದಿನಗಳಿಂದ ಖಾರಮಂಡಕ್ಕಿ, ತಿಂಡಿ–ತಿನಿಸುಗಳ ವ್ಯಾಪಾರ ಜೋರಾಗಿತ್ತು. ಬಳೆಗಳಿಗೆ ಬೇಡಿಕೆ ಹೆಚ್ಚಿತ್ತು. ಬಳೆಯನ್ನು ದೇವರಿಗೆ ಅರ್ಪಿಸಿ, ನಂತರ ತಾವೂ ಧರಿಸಿದರೆ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ. ದೇವಾಲಯದ ಬಳಿ ಸಾಲುಗಟ್ಟಿದ ಬಳೆ ಅಂಗಡಿಗಳು ಜಾತ್ರೆಗೆ ಮೆರುಗನ್ನು ಹೆಚ್ಚಿಸಿದ್ದವು. ಜಾತ್ರೆಯ ಪ್ರಯುಕ್ತ ಗ್ರಾಮೀಣ ವಾದ್ಯಗಳಾದ ಉರುಮೆ, ತಪ್ಪಡಿ, ಡೊಳ್ಳು, ನಗಾರಿಗಳ ಬಡಿತ ಗಮನ ಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-44-212110711

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.