ನಾಯಕನಹಟ್ಟಿ: ಪಟ್ಟಣದಲ್ಲಿ ಸೋಮವಾರ ಗುರುತಿಪ್ಪೇರುದ್ರಸ್ವಾಮಿಯ ಮರಿಪರಿಷೆಯು ಅದ್ದೂರಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಜಾತ್ರೆಗೆ ಬರಲು ಸಾಧ್ಯವಾಗದ ಜನರು ಮರಿ ಪರಿಷೆಗೆ ಬಂದು ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದೆ. ಮಾರ್ಚ್ 06ರಂದು ವಿಜೃಂಭಣೆಯ ರಥೋತ್ಸವ ನಡೆದಿತ್ತು. ಆದರೂ ಮರಿಪರಿಷೆಗೆ ಭಾರೀ ಪ್ರಮಾಣದಲ್ಲಿ ಜನರು ಆಗಮಿಸಿದ್ದರು. ನೆರೆಯ ಜಿಲ್ಲೆ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಎತ್ತಿನಗಾಡಿ, ಟ್ರಾಕ್ಟರ್, ಸರಕು ಸಾಗಣಿಕೆ ವಾಹನ ಸೇರಿದಂತೆ ನಾನಾ ವಾಹನಗಳಲ್ಲಿ ಭಕ್ತರು ಆಗಮಿಸಿದ್ದರು. ಪಟ್ಟಣದಲ್ಲಿ ಭಕ್ತರು ತಂಗಿ ಸ್ಥಳದಲ್ಲಿಯೇ ಅಡುಗೆ ಮಾಡಿ ನೈವೇದ್ಯ ಅರ್ಪಿಸಿದರು.

ಸೋಮವಾರ ಬೆಳಗಿನಿಂದಲೇ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳ ನಡೆದವು. ಬೆಳಗ್ಗೆ ೮ಗಂಟೆಗೆ ದೇವರಿಗೆ ಮಹಾ ಮಂಗಳಾರತಿಯ ನಂತರ ನೆರೆದ ಭಕ್ತರಿಗೆ ದರ್ಶನವನ್ನು ಕಲ್ಪಿಸಲಾಯಿತು. ಬೆಳಗ್ಗೆಯಿಂದಲೇ ಹೊರಮಠ ಹಾಗೂ ಒಳಮಠಗಳು ಭಕ್ತರಿಂದ ತುಂಬಿತ್ತು. ಸರದಿ ಸಾಲಿನಲ್ಲಿ ನಿಂತ ಭಕ್ತರು ದೇವರ ದರ್ಶನ ಪಡೆದರು. ಹಣ್ಣು, ಕಾಯಿ, ಕೊಬ್ಬರಿ, ಅಕ್ಕಿ, ಬೇಳೆ, ಹೂವು ಸೇರಿದಂತೆ ನಾನಾ ವಸ್ತುಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರು. ರಥದ ಮುಂಭಾಗ, ದೇವಾಲಯಗಳ ಮುಂಭಾಗದಲ್ಲಿ ಸಾವಿರಾರು ಭಕ್ತರು ಕೊಬ್ಬರಿ ಸುಟ್ಟು ಹರಕೆ ಸಲ್ಲಿಸಿದರು. ಹೊರಮಠದಲ್ಲಿ ಸಾವಿರಾರು ಭಕ್ತರು ಪರುವುಗಳನ್ನು ಮಾಡಿ ಎಡೆ ಹಾಕುವ ಮೂಲಕ ತಮ್ಮ ಹರಕೆಗಳ ಪೂರೈಸಿದರು.

ಮರಿಪರಿಷೆ ಅಂಗವಾಗಿ ವಿಶೇಷ ವಾರೋತ್ಸವ ಜರುಗಿತು. ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದೇವಾಲಯದ ಸಾಂಪ್ರದಾಯಿಕ ವಾದ್ಯಗಳು, ನಂದಿಧ್ವಜ ಸೇರಿದಂತೆ ನಾನಾ ವಾದ್ಯಗಳು ಉತ್ಸವದಲ್ಲಿದ್ದವು. ಸಂಜೆ ಊಳಿಗದ ಯುವಕರು ಸಂಪ್ರದಾಯದಂತೆ ತಿಪ್ಪೇರುದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿದ ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿಕೊಂಡು ಒಳಮಠದಿಂದ ತೇರುಬೀದಿ ಮಾರ್ಗವಾಗಿ ಹೊರಮಠಕ್ಕೆ ಕೆರೆತಂದು ವಾರೋತ್ಸವ ಕಾರ್ಯಕ್ರಮವನ್ನು ನಡೆಸಿದರು. ನಂತರ ಪಲ್ಲಕ್ಕಿಯನ್ನು ಅದೇ ಮಾರ್ಗದಲ್ಲಿ ಒಳಮಠಕ್ಕೆ ತಂದು ದೇವರನ್ನು ಗುಡಿದುಂಬಿಸಿದರು.

ಮರಿಪರಿಷೆಯಲ್ಲಿ ನೆರೆದ ಸಾವಿರಾರು ಭಕ್ತರಿಗೆ ಒಳಮಠದ ಆವರಣದಲ್ಲಿ ದಾವಣಗೆರೆಯ ಬಿ.ಪ್ರಭಣ್ಣ ಮತ್ತು ಬಿ.ಶಿವಣ್ಣ ಬೇತೂರು ಇಂಡಸ್ಟ್ರೀಸ್ರವರು ೧೦ಸಾವಿರ ಲಡ್ಡು ವಿತರಣೆ ಮತ್ತು ಬೃಹತ್ಪ್ರಮಾಣದಲ್ಲಿ ದಾಸೋಹ ವ್ಯವಸ್ಥೆ ನಡೆಸಿದರು.

ಭರ್ಜರಿ ವ್ಯಾಪಾರ ವಹಿವಾಟು

ಮರಿಪರಿಷೆಯ ನಿಮಿತ್ತ ಪಟ್ಟಣದ ಸಂತೆಪೇಟೆ ಮೈದಾನ, ತೇರುಬೀದಿ, ಒಳಮಠದ ರಸ್ತೆಯಲ್ಲಿ ಹಲವು ವ್ಯಾಪಾರ ಮಳಿಗೆಗಳು ಭರ್ಜರಿಯಾದ ವಹಿವಾಟು ನಡೆಸಿದವು. ಖಾರಮಂಡಕ್ಕಿ, ಬೆಂಡು ಬತ್ತಾಸು, ಮಕ್ಕಳ ಆಟಿಕೆಗಳು ಸೇರಿದಂತೆ ಹಲವು ಅಂಗಡಿಗಳು ಮರಿಪರಿಷೆಗೆ ಮೆರೆಗು ನೀಡಿದ್ದವು. ಮರಿಪರಿಷೆ ಹಿನ್ನೆಲೆಯಲ್ಲಿ ಸಿಹಿತಿಂಡಿ, ಮಕ್ಕಳ ಆಟಿಕೆ, ದಿನಬಳಕೆ ವಸ್ತುಗಳು ಸೇರಿದಂತೆ ನಾನಾ ಅಂಗಡಿಗಳಿದ್ದವು. ಈ ವೇಳೆ ಪೊಲೀಸ್ ಇಲಾಖೆ, ಮರಿಪರಿಷೆಗೆ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.