ನಾಯಕನಹಟ್ಟಿ: ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿಯ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 6ರಂದು ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ದೊಡ್ಡರಥಕ್ಕೆ ಬಾಬುದಾರರು ಕಳಸ ಪ್ರತಿಷ್ಠಾಪನೆ ಕಾರ್ಯ ನೆರವೇರಿಸಿದರು.

ಪ್ರತಿವರ್ಷ ಜಾತ್ರೆಗೆ 5ದಿನಗಳ ಮುನ್ನ ಬೃಹತ್ ರಥಕ್ಕೆ ಕಳಸವನ್ನು ಪ್ರತಿಷ್ಠಾಪಿಸುವುದು ಸಂಪ್ರದಾಯವಾಗಿದೆ. ಗ್ರಾಮದ ಬಾಬುದಾರರು, ದೈವಸ್ಥರು ಕಳಸವನ್ನು ಪಟ್ಟಣದ ಒಳಮಠದಿಂದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು ಮತ್ತು ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ದೊಡ್ಡರಥದ ಬಳಿ ತಂದರು. ಕಳಸವನ್ನು ಕಂಬಳಿಯ ಗದ್ದುಗೆಯ ಮೇಲಿಟ್ಟು ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಸುಮಾರು ೪೫ಕೆಜಿ ತೂಕ 6ಅಡಿ ಎತ್ತರದ ನೂತನ ಕಳಸವನ್ನು ಹಗ್ಗದ ಸಹಾಯದಿಂದ ರಥದ ಮೇಲಕ್ಕೆ ಎಳೆದು ಪ್ರತಿಷ್ಠಾಪಿಸಲಾಯಿತು.

ನೂರಾರು ಭಕ್ತರು, ಮಹಿಳೆಯರು ಗುರುತಿಪ್ಪೇರುದ್ರಸ್ವಾಮಿಗೆ ಜಯಘೋಷಗಳನ್ನು ಕೂಗಿದರು. ಈ ಮೂಲಕ ವಿದ್ಯುಕ್ತವಾಗಿ ಜಾತ್ರೆಗೆ ಚಾಲನೆ ನೀಡಲಾಯಿತು. ಕಳಸ ಪ್ರತಿಷ್ಠಾಪನೆಯ ನಂತರ ರಥಕ್ಕೆ ವಿವಿಧ ಬಣ್ಣಗಳ ಭಾವುಟಗಳನ್ನು ಜೋಡಿಸುವ ಕಾರ್ಯ ಮಾಡಲಾಗುತ್ತದೆ. ಹಾಗೂ ಈ ಆಚರಣೆಯ ಮೂಲಕ ಗ್ರಾಮದ ಪ್ರತಿಯೊಂದು ಸಮುದಾಯದ ಬಾಬುದಾರರು, ದೈವಸ್ಥರು, ಗ್ರಾಮಸ್ಥರಿಗೆ ಜಾತ್ರೆಗೆ ಅಧಿಕೃತವಾದ ಆಹ್ವಾನವನ್ನು ನೀಡಲಾಗುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಭಕ್ತರಿಗೂ ಪಾನಕ, ಕೋಸಂಬರಿ ಹಾಗೂ ಪ್ರಸಾದವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ದೇಗುಲ ಇಒ ಹೆಚ್.ಗಂಗಾಧರಪ್ಪ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷರಾದ ಎಂ.ವೈ.ಟಿ.ಸ್ವಾಮಿ, ಜೆ.ಪಿ.ರವಿಶಂಕರ್, ಪ.ಪಂ.ಸದಸ್ಯರಾದ ಜೆ.ಆರ್.ರವಿಕುಮಾರ್, ಎನ್.ಮಹಾಂತಣ್ಣ, ಗ್ರಾಮಸ್ಥರಾದ ತಳವಾರ ತಿಪ್ಪೇಸ್ವಾಮಿ, ಬೋರಯ್ಯ, ಕೆ.ಎನ್.ತಿಪ್ಪೇರುದ್ರಪ್ಪ, ಆರ್.ಟಿ.ತಿಪ್ಪೇಸ್ವಾಮಿ, ದೊರೆತಿಪ್ಪೇಸ್ವಾಮಿ, ನಾರಾಯಣಚಾರ್, ಗಿರಿಯಪ್ಪ, ಪಿ.ಯು.ಸುನಿಲ್ಕುಮಾರ್, ದಳವಾಯಿ ರುದ್ರಮುನಿ, ಉಮೇಶ್, ಸಿಬ್ಬಂದಿ ಎಸ್.ಸತೀಶ್, ಶಿವಕುಮಾರ್, ಶಂಕರಪ್ಪ, ಮಂಜುನಾಥ್, ಮಹಾದೇವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.