ನಾಯಕನಹಟ್ಟಿ: ಇಲ್ಲಿಯ ಗುರುತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಜಾತ್ರೆ ನಂತರ ಮೂರು ಹುಂಡಿ ಎಣಿಕೆ ಶುಕ್ರವಾರ ನಡೆದಿದ್ದು ಒಟ್ಟು ₹80,84,625 ಸಂಗ್ರಹವಾಗಿದೆ.

ವಾರ್ಷಿಕ ಜಾತ್ರೆ ಹಾಗೂ ಮರಿಪರಿಷೆಯ ನಂತರ ಹುಂಡಿ ಹಣದ ಎಣಿಕೆ ಕಾರ್ಯ ಮಾಡಲಾಗುತ್ತದೆ. ಆದರೆ ಈ ವರ್ಷ ಒಂದೂವರೆ ತಿಂಗಳು ತಡವಾಗಿ ಹುಂಡಿಯನ್ನು ತೆರೆಯಲಾಗಿದೆ. ಮೊದಲು ಹೊರಮಠ ದೇವಾಲಯದಲ್ಲಿ ಮುಜುರಾಯಿ ಹಾಗೂ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ದೇವಾಲಯ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ಬೆಳಿಗ್ಗೆ 9.30ಗಂಟೆಗೆ ಶುರುವಾದ ಎಣಿಕೆ ಕಾರ್ಯ ಮಧ್ಯಾಹ್ನ 12ಗಂಟೆಗೆ ಮುಕ್ತಾಯವಾಯಿತು. ನಂತರ ಒಳಮಠದಲ್ಲಿ ಆರಂಭವಾದ ಎಣಿಕೆ ಕಾರ್ಯ ಸಂಜೆ 6ಗಂಟೆಗೆ ಮುಕ್ತಾಯವಾಯಿತು. ಬ್ಯಾಂಕ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಸಹಯೋಗದಲ್ಲಿ ನಡೆಯಿತು.

ಹೊರಮಠದಲ್ಲಿ ₹ 19,37,145 ಒಳಮಠದಲ್ಲಿ ₹55,60,580 ಸಂಗ್ರಹವಾಗಿದೆ. ಹಾಗೇ ದಾಸೋಹ ಭವನದಲ್ಲಿದ್ದ ಹುಂಡಿಯಲ್ಲಿ ₹ 5,86,900 ಸಂಗ್ರಹವಾಯಿತು. ಸಂಗ್ರಹವಾದ ಹಣವನ್ನು ಸಂಜೆ ದೇವಾಲಯದ ಕೆನರಾ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.

ಹೊರಮಠ ಮತ್ತು ಒಳಮಠಗಳ ಹುಂಡಿಯಲ್ಲಿ ಹಲವು ಬೆಳ್ಳಿ ನಾಣ್ಯಗಳು, ಬೆಳ್ಳಿ ತೊಟ್ಟಿಲುಗಳು, ಬೆಳ್ಳಿ ಆಭರಣಗಳು, ಅಮೆರಿಕ ಡಾಲರ್ಗಳು, ಇಂಗ್ಲೆಂಡಿನ ಪೌಂಡ್ಗಳು, ಅರಬ್, ಸಿಂಗಾಪುರ, ಟಿಪ್ಪುಸುಲ್ತಾನ್ ಮತ್ತು ಬ್ರಿಟಿಷ್ ರಾಣಿ ವಿಕ್ಟೋರಿಯಾ ಅವರ ಕಾಲದ ನಾಣ್ಯಗಳು ಮತ್ತು ಕರೆನ್ಸಿಗಳು ದೊರೆತಿವೆ.

ಇದೇವೇಳೆ ಕಾರ್ಯನಿರ್ವಹಕಾಧಿಕಾರಿ ಎಚ್.ಗಂಗಾಧರಪ್ಪ, ಮುಜುರಾಯಿ ತಹಶೀಲ್ದಾರ್ ಎಂ.ಆರ್.ರಂಗಪ್ಪ, ಕಂದಾಯ ಶಿರಸ್ತೇದಾರ್ ಸದಾಶಿವಪ್ಪ, ಕಂದಾಯ ಇಲಾಖೆ ಸಿಬ್ಬಂದಿ ರವಿ, ಜಗದೀಶ್, ಬ್ಯಾಂಕ್ ಸಿಬ್ಬಂದಿ ವಿಜಯಭಾಸ್ಕರ್ ಮಜ್ಜಿಗೆ, ವಿಪಿನ್ಬಾಬು, ಮನೋಹರ್, ಮಹಾಸ್ವಾಮಿ, ಪ್ರಸನ್ನಕುಮಾರ್, ವೀರಭದ್ರಪ್ಪ, ಪುರಂದರ್, ದೇವಾಲಯ ಸಿಬ್ಬಂದಿ ಎಸ್.ಸತೀಶ್, ಶಿವಕುಮಾರ್, ಮಂಜುನಾಥ, ರುದ್ರೇಶ್, ತಿಪ್ಪಮ್ಮ, ಮಹಾದೇವ ಅವರೂ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-44-617964544

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.