ನಾಯಕನಹಟ್ಟಿ: ‘ಭಕ್ತಿ, ಶಕ್ತಿ, ಧೈರ್ಯದ ಸಂಕೇತವಾದ ಸೋಮನಾಥ ಮೂಲ ಜ್ಯೋತಿರ್ಲಿಂಗದ ಅವಶೇಷಗಳ ದರ್ಶನಕ್ಕೆ ಮೇ 4ರಂದು ಪಟ್ಟಣದ ಒಳಮಠ ದೇಗುಲದ ಆವರಣದಲ್ಲಿ ವ್ಯವಸ್ಥೆ ಮಾಡಲಾಗುವುದು’ ಎಂದು ದೇಗುಲ ಸಮಿತಿ ಮಾಜಿ ಅಧ್ಯಕ್ಷ ಎಂ.ವೈ.ಟಿ.ಸ್ವಾಮಿ ಹೇಳಿದರು.

ಜ್ಯೋತಿರ್ಲಿಂಗ ದರ್ಶನದ ಭಿತ್ತಿಪತ್ರಗಳನ್ನು ಶನಿವಾರ ಸುದ್ದಿಗೋಷಿಯಲ್ಲಿ ಬಿಡುಗಡೆ ಮಾಡಿದ ಅವರು, ‘ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು ಮತ್ತು ಸೋಮನಾಥನ ಮೂಲ ಜ್ಯೋತಿರ್ಲಿಂಗವು ಹಲವು ವರ್ಷಗಳಿಂದ ಕಣ್ಮರೆಯಾಗಿರುವುದಾಗಿ ಹೇಳಲಾಗಿತ್ತು. ಆದರೆ, ಕೆಲವರಿಂದ ಆ ಅವಶೇಷಗಳನ್ನು ರಕ್ಷಿಸಿ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ಅವಶೇಷಗಳನ್ನು ಭಕ್ತರ ದರ್ಶನಕ್ಕಾಗಿ ಇಡಲಾಗಿದೆ. ಇದನ್ನು ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಂತೆ ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ದು ಭಕ್ತರಿಗೆ ದರ್ಶನ ಕಲ್ಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಈ ಅಮೂಲ್ಯ ಅವಶೇಷಗಳಿಗೆ ರುದ್ರಾಭಿಷೇಕದ ಮೂಲಕ ಪೂಜೆ ನಡೆಯಲಿದೆ. ಈ ವಿಶೇಷ ಪೂಜೆಯಲ್ಲಿ ಶಿವನನ್ನು ರುದ್ರ ಸ್ವರೂಪದಲ್ಲಿ ವೇದಮಂತ್ರ ಸಹಿತ ಆರಾಧಿಸಿ ನಂತರ ಸತ್ಸಂಗ ಕಾರ್ಯಕ್ರಮ ನಡೆಸಲಾಗುವುದು. ಹಾಗಾಗಿ ಭಕ್ತರು ಮತ್ತು ಸಾರ್ವಜನಿಕರು ಮೇ 4ರ (ಸೋಮವಾರ) ಸಂಜೆ 4ಗಂಟೆಗೆ ಒಳಮಠದ ಆವರಣಕ್ಕೆ ಭೇಟಿ ನೀಡಿ ಜ್ಯೋತಿರ್ಲಿಂಗದ ದರ್ಶನ ಮಾಡಬೇಕು ಎಂದು ಮನವಿ ಮಾಡಿದರು.

ಆರ್ಟ್ ಆಫ್ ಲಿವಿಂಗ್ ಆಶ್ರಮದ ಶಿಕ್ಷಕಿ ಆರ್.ಕವಿತಾ ಧನ್ವಂತರಿ, ತೇಜಸ್ವಿನಿ ಗುರುರಾಜ್, ಪ.ಪಂ. ಸದಸ್ಯೆ ಸರ್ವಮಂಗಳಾ, ಗ್ರಾಮಸ್ಥರಾದ ಎಸ್.ಸತೀಶ್, ಲಲಿತಮ್ಮ, ಮಂಜುನಾಥ, ರಾಜೇಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-44-591027225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.