ನಾಯಕನಹಟ್ಟಿ: ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠದ ಆವರಣದಲ್ಲಿ ಸೋಮವಾರ ಸಾವಿರ ವರ್ಷ ಇತಿಹಾಸವಿರುವ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಹಾಗೂ ರುದ್ರಪೂಜಾ ವಿಧಿ ವಿಧಾನಗಳು ಸಡಗರದಿಂದ ನಡೆಯಿತು.

ಜ್ಯೋತಿರ್ಲಿಂಗವನ್ನು 108 ಪೂರ್ಣಕುಂಭಗಳೊಂದಿಗೆ ಮಹಿಳೆಯರು ಸ್ವಾಗತಿಸಿದರು. ಸಂಜೆ 4 ಗಂಟೆಗೆ ಒಳಮಠದ ಮುಂಭಾಗದಲ್ಲಿ ಆರ್ಟ್ ಆಫ್ ಲಿವಿಂಗ್ ಮೈಸೂರು ಆಶ್ರಮದ ದಿವ್ಯಪಾದ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಸೋಮನಾಥ ಜ್ಯೋತಿರ್ಲಿಂಗ ಅತೀ ಪುರಾತನವಾದದ್ದು, ಸೋಮನಾಥ ದೇವಾಲಯವು ಆಕ್ರಮಣಕಾರರ ದಾಳಿಗೆ ತುತ್ತಾಗುವ ಮುನ್ನ ಕಾಂತೀಯ ಶಕ್ತಿಯಿಂದ ಪಾಣಿಪೀಠದಿಂದ ಅಂದಾಜು 2 ಅಡಿ ಎತ್ತರಕ್ಕೆ ಗಾಳಿಯಲ್ಲಿ ತೇಲುತ್ತಿತ್ತು. ಆಕ್ರಮಣಕಾರರ ದಾಳಿಯಾದಾಗಿನಿಂದ ಮೂಲ ಜ್ಯೋತಿರ್ಲಿಂಗವು ಕಣ್ಮರೆಯಾಗಿತ್ತು ಎಂದು ದಿವ್ಯಪಾದ ಸ್ವಾಮೀಜಿ ತಿಳಿಸಿದರು.

ದೇವರ ದಯೆಯಿಂದ ಜ್ಯೋತಿರ್ಲಿಂಗದ ತುಣುಕುಗಳು ಸಂರಕ್ಷಿಸಲ್ಪಟ್ಟಿದ್ದವು. ಅವುಗಳನ್ನು ಬ್ರಾಹ್ಮಣ ಕುಟುಂಬವೊಂದು ದಕ್ಷಿಣ ಭಾರತಕ್ಕೆ ತಂದು ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿಗೆ ಒಪ್ಪಿಸಿತ್ತು. ಗುರುಗಳ ಆಜ್ಞೆಯಂತೆ ದೇಶದ ಜನರಿಗೆ ಸೋಮನಾಥನ ದರ್ಶನ ಮಾಡಿಸುವ ಪುಣ್ಯದ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಇದೇವೇಳೆ ನಿವೃತ್ತ ತಹಶೀಲ್ದಾರ್ ಎನ್. ರಘುಮೂರ್ತಿ, ದೇಗುಲದ ಕಾರ್ಯನಿರ್ವಾಹಣಾಧಿಕಾರಿ ಎಚ್.ಗಂಗಾಧರಪ್ಪ, ಆರ್ಟ್ ಆಫ್ ಲಿವಿಂಗ್ನ ಸಂದೀಪ್, ಕವಿತಾ, ತೇಜಸ್ವಿನಿ, ಅನಿತ, ನವೀನ್, ಕಿರಣ್, ಪ.ಪಂ. ಸದಸ್ಯರಾದ ಜೆ.ಆರ್. ರವಿಕುಮಾರ್, ಬಿ.ವಿನುತಾ ಮುಖಂಡರಾದ ಎಂ.ವೈ.ಟಿ. ಸ್ವಾಮಿ, ಎಚ್.ಡಿ. ರಾಜೇಂದ್ರ, ಶಿವಕುಮಾರ್, ಮಲ್ಲೇಶ್, ಪಿ.ಶಿವಣ್ಣ, ರಾಮರೆಡ್ಡಿ, ದೇವಾಲಯದ ಸಿಬ್ಬಂದಿ ಸತೀಶ್, ರುದ್ರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-44-890785203

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.