ನಾಯಕನಹಟ್ಟಿ: ಪಟ್ಟಣದ 16 ವಾರ್ಡ್ಗಳಲ್ಲಿ ರಸ್ತೆ, ಕುಡಿಯುವ ನೀರು, ಬೀದಿದೀಪ, ಸ್ವಚ್ಛತೆ ಮತ್ತು ನೈರ್ಮಲ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಸಲು 2026-27ನೇ ಸಾಲಿನಲ್ಲಿ ₹13.79 ಕೋಟಿ ಆದಾಯ, ₹13.74 ಕೋಟಿ ವೆಚ್ಚದೊಂದಿಗೆ ₹4.98 ಲಕ್ಷ ಮೊತ್ತದ ಉಳಿತಾಯ ಬಜೆಟ್ ಮಂಡಿಸಲಾಯಿತು.

ಪ.ಪಂ.ಸಭಾಂಗಣದಲ್ಲಿ ಮಂಗಳವಾರ ಪ.ಪಂ.ಅಧ್ಯಕ್ಷೆ ಟಿ.ಮಂಜುಳಾ ಶ್ರೀಕಾಂತ್ ಬಜೆಟ್ ಮಂಡಿಸಿ ಮಾತನಾಡಿದರು.

ನಿರೀಕ್ಷಿತ ಆದಾಯ: ಆಸ್ತಿ ತೆರಿಗೆ ₹40 ಲಕ್ಷ, ಆಸ್ತಿ ತೆರಿಯ ದಂಡ ₹20 ಲಕ್ಷ, ಉದ್ಯಮ ಪರವಾನಗಿ ಮತ್ತು ದಂಡ ಶುಲ್ಕ ₹5 ಲಕ್ಷ, ವಾಣಿಜ್ಯ ಸಂಕೀರ್ಣಗಳ ಬಾಡಿಗೆ ₹4.20 ಲಕ್ಷ, ಕಟ್ಟಡ ಪರವಾನಗಿ ಶುಲ್ಕ ₹6.30 ಲಕ್ಷ, ಸಂತೆ, ಬಸ್ನಿಲ್ದಾಣ, ಕರ ಶುಲ್ಕ ₹4.20 ಲಕ್ಷ, ನೀರಿನ ಕಂದಾಯ ₹18 ಲಕ್ಷ ಸೇರಿದಂತೆ ಸ್ಥಳಿಯ ಮತ್ತು ಸರ್ಕಾರಿ ಅನುದಾನಗಳ ಮೂಲಗಳಿಂದ ₹13.79 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ₹2.38 ಕೋಟಿ, ಕಚೇರಿಗೆ ಕಂಪ್ಯೂಟರ್ ಮತ್ತು ಇತರೆ ಉಪಕರಣಗಳ ಖರೀದಿಗೆ ₹6.75 ಲಕ್ಷ, ಬೀದಿದೀಪ, ಸೋಲಾರ್, ಹೈಮಾಸ್ಟ್ ದೀಪಗಳ ಅಳವಡಿಕೆಗೆ ₹20 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗೆ ₹30 ಲಕ್ಷ, ಘನತ್ಯಾಜ್ಯ ವಿಲೇವಾರಿ, ಬೀದಿದೀಪಗಳ ನಿರ್ವಹಣೆಗೆ ₹1.55 ಕೋಟಿ, ಸಿಬ್ಬಂದಿ ವೇತನ ₹1.70 ಕೋಟಿ, ಸದಸ್ಯರ ಗೌರವಧನ, ಅಧ್ಯಯನ ಪ್ರವಾಸ ₹25.50 ಲಕ್ಷ, ಜಾಹೀರಾತು ಮತ್ತು ಪ್ರಚಾರಕ್ಕೆ ₹5 ಲಕ್ಷ ಅನುದಾನ ಮೀಸಲಿಡಲಾಗಿದ್ದು, ಒಟ್ಟಾರೆ ₹4.98 ಲಕ್ಷ ಉಳಿತಾಯವಾಗಲಿದೆ ಎಂದರು.

ಉಪಾಧ್ಯಕ್ಷೆ ಪಿ.ಬೋಸಮ್ಮ, ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಸದಸ್ಯರಾದ ಎಂ.ಟಿ.ಮಂಜುನಾಥ, ಕೆ.ಪಿ.ತಿಪ್ಪೇಸ್ವಾಮಿ, ಟಿ.ಮಹೇಶ್ವರಿ, ಗುರುಶಾಂತಮ್ಮ, ಸುನೀತ, ಈರಮ್ಮ, ಜೆ.ಆರ್.ರವಿಕುಮಾರ್, ಪಾಪಮ್ಮ, ಸರ್ವಮಂಗಳ, ತಿಪ್ಪೇಶ್, ಬಿ.ವಿನುತಾ, ಎನ್.ಮಹಾಂತಣ್ಣ, ಪಿ.ಓಬಯ್ಯ, ಪ.ಪಂ. ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-44-596797007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.