ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಪ್ರತಿಮೆ ಲೋಕಾರ್ಪಣೆ

Last Updated 30 ಜುಲೈ 2022, 5:42 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನ ನಾಗಸಮುದ್ರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ವಾಲ್ಮೀಕಿ ಪ್ರತಿಮೆಯನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.

ಸ್ಥಳೀಯ ಮದಕರಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಈ ಪ್ರತಿಮೆಯನ್ನು ಸ್ಥಾಪಿಸಿದೆ. ಲೋಕಾರ್ಪಣೆ ಅಂಗವಾಗಿ ಶುಕ್ರವಾರ ಮುಂಜಾನೆ 4 ಗಂಟೆಗೆ ಗಂಗಾಪೂಜೆ, ಗಂಗಾಪ್ರವೇಶ ನಡೆಯಿತು. ನಂತರ ನವಗ್ರಹ, ವಸ್ತುಗಣ ಹೋಮ, ನವಗ್ರಹ ಹೋಮ, ವಿಗ್ರಹದ ಪೀಠ ಸ್ಥಾಪನೆ, ಮೂರ್ತಿ ಮೆರವಣಿಗೆ ನಂತರ ವಿಗ್ರಹ ಪ್ರತಿಷ್ಠಾಪಿಸಲಾಯಿತು.

ಈ ಭಾಗದಲ್ಲಿ ನಾಯಕ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ. ಸಮಾಜಕ್ಕೆ ಜನಾಂಗದ ಕೊಡುಗೆ ಅಪಾರವಿದ್ದು, ಇಂದಿನ ಪೀಳಿಗೆಗೆ ವಾಲ್ಮೀಕಿ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ಗ್ರಾಮದಲ್ಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಮದಕರಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎನ್. ಮಾರನಾಯಕ ಹೇಳಿದರು.

ಕಾಂಗ್ರೆಸ್ ಮುಖಂಡ ಡಾ.ಬಿ. ಯೋಗೇಶ್ ಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಡಿ. ಮಂಜುನಾಥ್, ಎಂ.ಡಿ. ಚನ್ನಾರೆಡ್ಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ನಾಯಕ ಜನಾಂಗದ ಮುಖಂಡರಾದ ಗೋವಿಂದಪ್ಪ, ಅಡವಿ ಮಾರಯ್ಯ, ಬಿ. ವಿಜಯ್, ಸಂಸ್ಥೆ ಉಪಾಧ್ಯಕ್ಷ ಬೊಮ್ಮಣ್ಣ, ಕಾರ್ಯದರ್ಶಿ ರಮೇಶ್, ಓಬಳೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT