ಮೊಳಕಾಲ್ಮುರು: ಪಟ್ಟಣದ ರಾಜ್ಯ ಸ್ವಕುಳಸಾಳಿ ಗುರುಪೀಠದ ಸಮುದಾಯ ಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸೇವೆಗೆ ನೀಡಲಾಗುವುದು ಎಂದು ಸಮುದಾಯದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಭಂಡಾರೆ ತಿಳಿಸಿದರು.
ಭವನದ ಕಾಮಗಾರಿಯನ್ನು ಬುಧವಾರ ವೀಕ್ಷಿಸಿ ಅವರು ಮಾತನಾಡಿದರು.
ಗುರುಪೀಠವು ಸಮಾಜಕ್ಕೆ ರಾಜ್ಯಮಟ್ಟದ ಪೀಠವಾಗಿದೆ. ಇಲ್ಲಿ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು, ಹೆಚ್ಚು ನಡೆಯಲು ಕ್ರಮ ಕೈಗೊಳ್ಳಲಾಗಿದೆ. ನಾನಾ ಕಾರಣಗಳಿಂದ ಸಮುದಾಯ ಭವನ ಕಾಮಗಾರಿ ವಿಳಂಬವಾಗಿದೆ. ₹ 90 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಸದ್ಯ ₹ 40 ಲಕ್ಷ ವಿವಿಧ ಮೂಲಗಳಿಂದ ಲಭ್ಯವಾಗಿದ್ದು, ಬಾಕಿ ಹಣವನ್ನು ಸಮುದಾಯದವರಿಂದ ದೇಣಿಗೆ ಸಂಗ್ರಹಿಸಲು ಸಭೆ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಭವನ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ₹ 3 ಲಕ್ಷ ಸಹಾಯಧನದ ಚೆಕ್ ನೀಡಿತು. ಸಂಸ್ಥೆ ಅಧಿಕಾರಿ ಶಶಿಧರ್, ಮಂಜುನಾಥ್, ಸ್ವಕುಳಸಾಳಿ ಸಮಾಜದ ಜ್ಞಾನದೇವ್ ವಾಂಜ್ರೆ, ಕಿರಣ್ ವಾಂಜ್ರೆ, ವಿಶ್ವಕುಮಾರ್, ಗಿರೀಶ್ ಪಾಣಿಭಾತೆ, ಪಾಂಡುರಂಗ ಟೋಪಣೆ, ರಮೇಶ್ ಪಾಣಿಭಾತೆ, ಶ್ರೀಧರ ಸಪಾರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.