ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಾರ್ಪಣೆಗೆ ಸಜ್ಜಾದ ಶನೈಶ್ಚರ ಸ್ವಾಮಿ ದೇವಾಲಯ

Published : 2 ಆಗಸ್ಟ್ 2024, 15:28 IST
Last Updated : 2 ಆಗಸ್ಟ್ 2024, 15:28 IST
ಫಾಲೋ ಮಾಡಿ
Comments

ಹೊಸದುರ್ಗ: ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಎ.ಪಿ.ಎಂ.ಸಿ ಎದುರಿನ ಶನೈಶ್ಚರ ಸ್ವಾಮಿ ದೇವಾಲಯ ಲೋಕಾರ್ಪಣೆ ಸಮಾರಂಭ ಆಗಸ್ಟ್‌ 5ರಿಂದ ಪ್ರಾರಂಭವಾಗಲಿದೆ.

ಪಟ್ಟಣದ ಟಿ.ಬಿ. ವೃತ್ತದಿಂದ ಶನೈಶ್ವರ ದೇವಾಲಯದವರೆಗೂ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪಟ್ಟದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

ಗುರು ಶನೈಶ್ಚರ ಭಕ್ತ ಮಂಡಳಿಯ ಸಿ. ಪ್ರಕಾಶ್ ನೇತೃತ್ವದಲ್ಲಿ  ಜನಪ್ರತಿನಿಧಿಗಳು, ಮುಖಂಡರು ಹಾಗೂ ಭಕ್ತರಿಂದ ₹ 2 ಕೋಟಿ ಸಂಗ್ರಹಿಸಿ ಅತ್ಯಾಕರ್ಷಕ ದೇವಾಲಯ ನಿರ್ಮಿಸಲಾಗಿದೆ.

ಕಾರ್ಕಳದ ಶಿಲ್ಪಿ ಪ್ರಕಾಶ್ ಆಚಾರ್ಯ ಅವರು ಪಂಚಲೋಹದಲ್ಲಿ ಶನೈಶ್ಚರ ಮೂರ್ತಿ ಕೆತ್ತಿದ್ದಾರೆ. ಆಗಸ್ಟ್‌ 5, 6 ಮತ್ತು 7ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕೃಷ್ಣಮೂರ್ತಿ ಘನಪಾಠಿ ನೇತೃತ್ವದಲ್ಲಿ ಹೋಮ, ಪ್ರಾಣ ಪ್ರತಿಷ್ಠಾಪನೆ, ವಿವಿಧ ಪೂಜಾ ಕಾರ್ಯಗಳು ಜರುಗಲಿವೆ. ಪಟ್ಟಣದ ವಿವಿಧ ದೇವರುಗಳ ಮೆರವಣಿಗೆ, 130 ಕುಂಭಮೇಳ, ವಿವಿಧ ಕಲಾತಂಡಗಳೊಂದಿಗೆ ಆನಂದ್ ಗುರೂಜಿ ಅವರ ಅದ್ದೂರಿ ಮೆರವಣಿಗೆ ನಡೆಯಲಿದೆ ಎಂದು ಕಾರ್ಯದರ್ಶಿ ರಾಜಣ್ಣ ತಿಳಿಸಿದರು.

ಎಲ್ಲ ಬಗೆಯ ಗೃಹದೋಷ ನಿವಾರಣೆಗಾಗಿ ಶನೈಶ್ಚರ ಮಹಾಯಾಗ ನಡೆಯಲಿದ್ದು ಆಸಕ್ತರು ಭಕ್ತ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ನಿರಂತರ ಅನ್ನದಾಸೋಹ ನಡೆಯಲಿದೆ. ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರು ಶನೈಶ್ಚರ ಭಕ್ತ ಮಂಡಳಿ ಅಧ್ಯಕ್ಷ ಪ್ರಕಾಶ್ ಸಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT