ಹೆಚ್ಚುವರಿ ಶಿಕ್ಷಕರಿಗೆ ಆಕ್ಷೇಪಣೆಗೆ ಅವಕಾಶವಿಲ್ಲ!

7

ಹೆಚ್ಚುವರಿ ಶಿಕ್ಷಕರಿಗೆ ಆಕ್ಷೇಪಣೆಗೆ ಅವಕಾಶವಿಲ್ಲ!

Published:
Updated:
Deccan Herald

ಹೊಳಲ್ಕೆರೆ: ಅ.10ರ ಬೆಳಿಗ್ಗೆ ರಾಜ್ಯದಾದ್ಯಂತ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಿಸಿದ್ದು, ಅ.9ರಂದೇ ಆಕ್ಷೇಪಣೆ ಸಲ್ಲಿಕೆಯ ಅವಧಿ ಮುಕ್ತಾಯಗೊಂಡಿದೆ!

ವರ್ಗಾವಣೆಯ ವೇಳಾಪಟ್ಟಿಯಂತೆ ಅ.8ರಂದು ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಿಸಿ, ಅ.9ರವರೆಗೆ ಆನ್‌ಲೈನ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕಾಗಿತ್ತು. ಆದರೆ ಶಿಕ್ಷಕರ ತಂತ್ರಾಂಶದಲ್ಲಿ ಗೊಂದಲಗಳು ಉಂಟಾಗಿದ್ದರಿಂದ ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ಅ.10ರ ಬೆಳಿಗ್ಗೆ ಪ್ರಕಟಿಸಲಾಗಿದೆ. ಆದರೆ ಆನ್‌ಲೈನ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಹೋದರೆ ‘ಕ್ಲೋಸ್ಡ್’ ಎಂದು ತೋರಿಸುತ್ತದೆ.

ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಕಚೇರಿಗೆ ಬಂದು ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಿ ಎಂದು ಹೇಳುತ್ತಾರೆ.

‘ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಣೆಗೂ ಮುನ್ನವೇ ಆಕ್ಷೇಪಣೆ ಸಲ್ಲಿಕೆಯ ಅವಕಾಶ ಮುಗಿಸಿದರೆ ಹೇಗೆ? ಪಟ್ಟಿಯಲ್ಲಿ ಹೆಸರು ನೋಡದೆ ಆಕ್ಷೇಪಣೆ ಸಲ್ಲಿಸಲಾಗುತ್ತದೆಯೇ? ವರ್ಗಾವಣೆ ನಿಯಮಗಳ ಬಗ್ಗೆ ಅಧಿಕಾರಿಗಳಿಗೇ ಸರಿಯಾದ ಸ್ಪಷ್ಟತೆ ಇಲ್ಲ. ಹೀಗಿರುವಾಗ ಮ್ಯಾನುಯಲ್ ಆಕ್ಷೇಪಣೆಗಳನ್ನು ಹೇಗೆ ಪರಿಗಣಿಸುತ್ತಾರೆ? ಎಂಬ ಅನುಮಾನ ಶಿಕ್ಷಕರಲ್ಲಿದೆ.

ಅ.15 ಮತ್ತು 16ರಂದು ಹೆಚ್ಚುವರಿ ಶಿಕ್ಷಕರ ಕೌನ್ಸೆಲಿಂಗ್‌ ನಿಗದಿಯಾಗಿದ್ದು, 2 ದಿನ ಆನ್‌ಲೈನ್‌ನಲ್ಲಿ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !