ಗುರುವಾರ , ಮೇ 13, 2021
44 °C
ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ–ಗೊರ್ಲತ್ತು ಗ್ರಾಮ

ಚಳ್ಳಕೆರೆ: ಮರಳು ಗಣಿ ಚಟುವಟಿಕೆ ಸ್ಥಗಿತಗೊಳಿಸಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ತಾಲ್ಲೂಕಿನ ಕಲಮರಹಳ್ಳಿ ಹಾಗೂ ಗೊರ್ಲತ್ತು ಗ್ರಾಮದ ಬಳಿ ಇರುವ ಮರಳು ಬ್ಲಾಕ್‍ಗಳಲ್ಲಿ ಮರಳು ಸಾಗಾಣಿಕೆ ಸ್ಥಗಿತಗೊಳಿಸಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶಿಸಿದೆ.

ನಿಯಮಾನುಸಾರ ಮರಳು ಗಣಿ ಚಟವಟಿಕೆ ಪುನರ್ ಆರಂಭಿಸಲು ಭೂವಿಜ್ಞಾನ ಇಲಾಖೆ ಕಳೆದ 15ರಂದು ಆದೇಶ ಹೊರಡಿಸಿತ್ತು.

ಇದಕ್ಕೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣ ಮರಳು ಬ್ಲಾಕ್‍ಗಳಲ್ಲಿ ಮರಳು ಸಾಗಾಣಿಕೆ ಮಾಡಲು ಗುತ್ತಿಗೆದಾರರಿಗೆ ನೀಡಿದ್ದ ಆದೇಶವನ್ನು ಇಲಾಖೆ ರದ್ದುಪಡಿಸಿದೆ.

‘ತಾಲ್ಲೂಕು ಮರಳು ಸಮಿತಿಯ ನಡಾವಳಿ ಹಾಗೂ ಅಧಿಕಾರಿಗಳ ಜಂಟಿ ತಪಾಸಣಾ ವರದಿಯನ್ನು ಜಿಲ್ಲಾ ಮರಳು ಸಮಿತಿಯಲ್ಲಿ ಚರ್ಚಿಸಬೇಕಿರುವ ಕಾರಣ ಮರಳು ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಮರಳು ಗಣಿ ಚಟುವಟಿಕೆಯನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಆದೇಶಿಸಿದೆ’ ಎಂದು ಶಾಸಕ ಟಿ. ರಘುಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.