ಬಿಜೆಪಿ ನಾಯಕರ ವಿರುದ್ಧ ಆಕ್ರೋಶ

7
ಬಿಜೆಪಿ ಕಚೇರಿ ಮುಂಭಾಗ ಪ್ರತಿಭಟಿಸಿದ ಕಾಂಗ್ರೆಸ್‌ ಮುಖಂಡರು

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ

Published:
Updated:
Prajavani

ಚಿತ್ರದುರ್ಗ: ಕಾಂಗ್ರೆಸ್ ಶಾಸಕರನ್ನು ಖರೀದಿಸಿ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ಇಲ್ಲಿ ಗುರುವಾರ ಬಿಜೆಪಿ ಕಚೇರಿ ಎದುರು ಪ್ರತಿಭಟಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಸಮ್ಮಿಶ್ರ ಸರ್ಕಾರದ ಆಡಳಿತ ಸಹಿಸಲಾಗದ ಬಿಜೆಪಿ ವರಿಷ್ಠರು ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಕುದುರೆ ವ್ಯಾಪಾರದಲ್ಲಿ ತೊಡಗಿರುವುದು ಅತ್ಯಂತ ಖಂಡನೀಯ ಎಂದರು.

ಸರ್ಕಾರ ಪತನಗೊಳಿಸಲು ಅನೈತಿಕ ಮಾರ್ಗದಲ್ಲಿ ಹೊರಟಿರುವ ಬಿಜೆಪಿ ಮುಖಂಡರ ಕನಸು ಫಲಿಸುವುದಿಲ್ಲ. ಅಧಿಕಾರ ಪಡೆಯಲು ಇದೇ ರೀತಿ ಕುತಂತ್ರ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಪಾತ್ಯರಾಜನ್, ಪದಾಧಿಕಾರಿಗಳಾದ ಅಜ್ಜಪ್ಪ, ಕೆ.ಪಿ. ಸಂಪತ್‌ಕುಮಾರ್, ಸೈಯದ್ ಅಲ್ಲಾಭಕ್ಷ್, ಆರ್. ಪ್ರಕಾಶ್, ಮಹಮದ್ ಅಶ್ರಫ್‌ಆಲಿ, ಡಿ.ಎಸ್. ಸೈಯದ್‌ ವಲಿಖಾದ್ರಿ, ಜಯಪ್ಪ, ಮಹಡಿ ಶಿವಮೂರ್ತಿ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !