ಪದ್ಮಾವತಿ ಧಾರಾವಾಹಿಯ ನಟ ತ್ರಿವಿಕ್ರಮ್‌ ಭೇಟಿ

7

ಪದ್ಮಾವತಿ ಧಾರಾವಾಹಿಯ ನಟ ತ್ರಿವಿಕ್ರಮ್‌ ಭೇಟಿ

Published:
Updated:
Deccan Herald

ಹಿರಿಯೂರು: ‘ನಗರದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಸುವ ಹಿನ್ನೆಲೆಯಲ್ಲಿ ಪದ್ಮಾವತಿ ಧಾರಾವಾಹಿ ಖ್ಯಾತಿಯ ನಟ ತ್ರಿವಿಕ್ರಮ್ ಶುಕ್ರವಾರ ರಾತ್ರಿ ನಗರದ ತೇರುಮಲ್ಲೇಶ್ವರ ದೇವಸ್ಥಾನದ ವೃತ್ತದಲ್ಲಿರುವ ಲಕ್ಕಿ ಜಿಮ್‌ಗೆ ಭೇಟಿ ನೀಡಿದ್ದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಡುವಿನ ವೇಳೆ ಅಥವಾ ಸಮಯದ ಹೊಂದಾಣಿಕೆ ಮಾಡಿಕೊಂಡು ಪ್ರತಿದಿನ ಜಿಮ್ ಗೆ ಹೋಗುತ್ತೇನೆ. ಯುವಕರಲ್ಲಿ ಆರೋಗ್ಯ ರಕ್ಷಣೆ ಕುರಿತ ಕಾಳಜಿ ಹೆಚ್ಚಿಸಬೇಕೆಂಬ ಹಿನ್ನೆಲೆಯಲ್ಲಿ ಹಿರಿಯೂರಿನಲ್ಲಿ ಲಕ್ಕಿ ಜಿಮ್ ಮಾಲೀಕ ಶಿವಣ್ಣ ನೇತೃತ್ವದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಸಬೇಕೆಂಬ ಆಲೋಚನೆ ಇದೆ. ಅವಕಾಶ ಸಿಕ್ಕರೆ ಸಿನಿಮಾದಲ್ಲೂ ನಟಿಸುತ್ತೇನೆ ಎಂದರು.

ತ್ರಿವಿಕ್ರಮ್ ಅವರನ್ನು ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ ಪೂಜಾರ್, ಇ.ಜಿ.ಎಸ್. ಗೋವಿಂದಪ್ಪ, ಹುಚ್ಚವ್ವನಹಳ್ಳಿ ಪ್ರಸನ್ನ, ಗುರುಮೂರ್ತಿ, ಕಾಂತರಾಜ್, ಗೋವಿಂದ, ಪುಟ್ಟಣ್ಣ ಸನ್ಮಾನಿಸಿದರು. ಶಿವಣ್ಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !