ಮಕ್ಕಳತ್ತ ಪೋಷಕರ ಗಮನವಿರಲಿ: ಡಿ.ಟಿ. ಶ್ರೀನಿವಾಸ್

7

ಮಕ್ಕಳತ್ತ ಪೋಷಕರ ಗಮನವಿರಲಿ: ಡಿ.ಟಿ. ಶ್ರೀನಿವಾಸ್

Published:
Updated:
Deccan Herald

ಹಿರಿಯೂರು: 16 ರಿಂದ 20 ನೇ ವಯೋಮಾನದ ಯುವಕರು ಮೊಬೈಲ್ ಹಿಡಿದು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಟಿ.ವಿ. ನೋಡುವುದನ್ನು ಬಿಟ್ಟು ಪೋಷಕರು ಗಮನ ಹರಿಸಬೇಕು ಎಂದು ಬೆಂಗಳೂರಿನ ಎಸ್‌ಇಎ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಟಿ. ಶ್ರೀನಿವಾಸ್ ಎಚ್ಚರಿಸಿದರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ನಾಯಕ ಸಮುದಾಯದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ವೈದ್ಯರೇ ಆಗಬೇಕು, ಎಂಜಿನಿಯರ್‌ ಆಗಬೇಕು ಎಂಬ ಹಠವನ್ನು ಪೋಷಕರು ಬಿಡಬೇಕು. ಮಕ್ಕಳಿಗೆ ಯಾವ ವಿಷಯದ ಬಗ್ಗೆ ಆಸಕ್ತಿ ಇದೆ ಎಂದು ಮಕ್ಕಳ ಜತೆ ಮುಕ್ತವಾಗಿ ಚರ್ಚಿಸಬೇಕು. ಬದುಕು ರೂಪಿಸಿಕೊಳ್ಳಲು ವೈದ್ಯ, ಎಂಜಿನಿಯರರೇ ಆಗಬೇಕು ಎಂಬ ಭ್ರಮೆಯಿಂದ ಹೊರಬರಬೇಕು ಎಂದು ತಿಳಿಸಿದರು.

‘ಮಾರ್ಚ್ 2017 ರಲ್ಲಿ ನಗರದಲ್ಲಿ ನಾವು ಆಯೋಜಿಸಿದ್ದ ಉದ್ಯೋಗ ಮೇಳದಿಂದ 1500 ಯುವಕ–ಯುವತಿಯರಿಗೆ ಉದ್ಯೋಗ ದೊರೆಯಿತು. ಹಿಂದಿನ ತಿಂಗಳು ಅಂಗವಿಕಲರಿಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 150 ಅಂಗವಿಕಲರನ್ನು ಆಯ್ಕೆ ಮಾಡಲಾಗಿದೆ’ ಎಂದರು.

ವಾಲ್ಮೀಕಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಂ. ನರಸಿಂಹಯ್ಯ ಮಾತನಾಡಿ, ‘ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ತಕ್ಕಂತೆ 7.5 ಮೀಸಲಾತಿ ನೀಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಸಿದ್ದರಾಮಯ್ಯನವರು ನಾಯಕ ಸಮುದಾಯದ ಬೆಂಬಲಕ್ಕೆ ಬರಲಿಲ್ಲ. ಹೀಗಾಗಿ ನಾಯಕ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದು, ನಮ್ಮ ಹಕ್ಕು ಪಡೆಯಲು ಹೋರಾಟಕ್ಕೆ ಸಿದ್ಧರಾಗಬೇಕು’ ಎಂದು ಕರೆ ನೀಡಿದರು.

 ಶ್ರೀನಿವಾಸ ಬಡಾವಣೆಯಲ್ಲಿ ನಿರ್ಮಿಸಿರುವ ವಾಲ್ಮೀಕಿ ಸಮುದಾಯ ಭವನದ ನಿರ್ವಹಣೆಯನ್ನು ವಾಲ್ಮೀಕಿ ಮಹಾಸಭಾಕ್ಕೆ ವಹಿಸಿಕೊಡಬೇಕು ಎಂದು ಸ್ಥಳೀಯ ಮುಖಂಡರು ನಗರಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ರಾಜನಹಳ್ಳಿಯ ಪ್ರಸನ್ನಾನಂದ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ತಾಲ್ಲೂಕು ಮಹಾಸಭಾ ಅಧ್ಯಕ್ಷ ರಾಜು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಹರ್ತಿಕೋಟೆ ವೀರೇಂದ್ರಸಿಂಹ, ಬಸವರಾಜನಾಯಕ್ ಮಾತನಾಡಿದರು. ನಗರಸಭಾಧ್ಯಕ್ಷ ಟಿ. ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ಪಿ.ವಿ. ನಟರಾಜ್,ಬಿ.ಆರ್. ಮಂಜುನಾಥ್, ಇಂದಿರಮ್ಮ, ತಿಪ್ಪೇರುದ್ರಣ್ಣ, ಜಯಶ್ರೀ ಇದ್ದರು.

ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !