ಮರದಲ್ಲಿ ಸಿಲುಕಿದ ಕಾರು: ಸೆಲ್ಫಿ ತೆಗೆದುಕೊಂಡ ಜನ

7

ಮರದಲ್ಲಿ ಸಿಲುಕಿದ ಕಾರು: ಸೆಲ್ಫಿ ತೆಗೆದುಕೊಂಡ ಜನ

Published:
Updated:
Deccan Herald

ಮೊಳಕಾಲ್ಮುರು: ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಸಮೀಪದ ಬೆಂಗಳೂರು–ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದು ಮರದಲ್ಲಿ ಸಿಲುಕಿದೆ. ಅಪಘಾತಕ್ಕೀಡಾದ ಕಾರಿನ ಸೋಜಿಗ ದೃಶ್ಯ ನೋಡಲು ಬಂದ ಸುತ್ತಲಿನ ಗ್ರಾಮಸ್ಥರು ಸೆಲ್ಫಿ ತೆಗೆದುಕೊಂಡು ಅಚ್ಚರಿ ವ್ಯಕ್ತಪಡಿಸಿದರು.

ಏರ್‌ಬ್ಯಾಗ್‌ ಬಿಚ್ಚಿಕೊಂಡ ಪರಿಣಾಮ ಕಾರಿನಲ್ಲಿದ್ದ ದಂಪತಿ ಅಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ನೋಂದಣಿ ಸಂಖ್ಯೆ ಹೊಂದಿರುವ ಕಾರಿನ ಮಾಲೀಕರು ಹಾಗೂ ಪ್ರಯಾಣಿಸಿದ ದಂಪತಿಯ ವಿವರ ಲಭ್ಯವಾಗಿಲ್ಲ.

ಶನಿವಾರ ಸಂಜೆ ಚಳ್ಳಕೆರೆಯಿಂದ ಬಳ್ಳಾರಿಗೆ ಹೊರಟಿದ್ದ ಕಾರು ಹಿರೇಹಳ್ಳಿ ಸಮೀಪದ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ. ಹಲವು ಬಾರಿ ಪಲ್ಟಿ ಹೊಡೆದ ಕಾರು ರಸ್ತೆ ಪಕ್ಕ ಪೊದೆಗೆ ಉರುಳಿದೆ. ಬಳಿಕ ಗದ್ದೆಯ ಬದುವಿನ ಮೇಲಿದ್ದ ಮರದಲ್ಲಿ ಸಿಲುಕಿದೆ. ತಕ್ಷಣ ನೆರವಿಗೆ ಧಾವಿಸಿದ ಸ್ಥಳೀಯರು ದಂಪತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಅಪಘಾತದ ಸುದ್ದಿ ತಿಳಿದ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಕಾರಿನ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ. ಕೆಲವರು ಸೆಲ್ಫಿ ತೆಗೆದುಕೊಂಡು ಮರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಳಕು ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !