ಪರಶುರಾಂಪುರ: ಹೋಬಳಿಯ ಹೊನ್ನಯ್ಯನರೊಪ್ಪದಲ್ಲಿ ದಶಕದಿಂದಲೂ ನನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದಿಂದ ಪ್ರತಿಭಟನೆ ಮಾಡಲಾಯಿತು.
ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಉಪ ವಿಭಾಗದ ವತಿಯಿಂದ 2015-16ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ₹ 8 ಲಕ್ಷ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ್ದರು. ಕಾರಣಾಂತರದಿಂದ ಕಾಮಗಾರಿ ಅಪೂರ್ಣಗೊಂಡಿದ್ದು ಕೂಡಲೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಎ.ಇ.ಇ ಕಾವ್ಯಾ ಅವರು ಸ್ಥಳಕ್ಕೆ ಬಂದು, ಒಳಗೆ ಕಾಮಗಾರಿ ಮುಗಿಸುವ ಬರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ಸು ಪಡೆಯಲಾಯಿತು.
ಈ ಸಂಧರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಣ್ಣ, ಕಾರ್ಯದರ್ಶಿ ಪ್ರಕಾಶ, ಉಪಾದ್ಯಕ್ಷ ಜಂಪಣ್ಣ, ಪದಾದಿಕಾರಿಗಳಾದ ಖಾದರ್ ಬಾಷಾ, ಕೊಂಡ್ಲಿ ಪರಮೇಶ್ರಪ್ಪ ತಿಮ್ಮಣ್ಣ, ವೃಷಬೇಂದ್ರಪ್ಪ ಶಂಕರಪ್ಪ, ನಾಗೇಂದ್ರಪ್ಪ, ಹೊನ್ನಪ್ಪ, ಮುದ್ದುರಾಜ ಮುಂತಾದವರು ಇದ್ದರು.