ಪ್ರಧಾನಿ ಕಚೇರಿಯಿಂದ ಬಂತು ದೂರವಾಣಿ ಕರೆ!

7
ದಂತವೈದ್ಯ ಡಾ.ಕೆ.ವಿಸಂತೋಷ್ ಪತ್ರಕ್ಕೆ ನರೇಂದ್ರ ಮೋದಿ ಸ್ಪಂದನೆ, ಬೇಡಿಕೆ ಕುರಿತು ಚರ್ಚೆ

ಪ್ರಧಾನಿ ಕಚೇರಿಯಿಂದ ಬಂತು ದೂರವಾಣಿ ಕರೆ!

Published:
Updated:
Deccan Herald

ಹೊಳಲ್ಕೆರೆ: ಪಟ್ಟಣದ ದಂತವೈದ್ಯ ಡಾ. ಕೆ.ವಿ.ಸಂತೋಷ್ ಅವರ ಮೊಬೈಲ್‌ಗೆ ಮಂಗಳವಾರ ಸಂಜೆ ಪ್ರಧಾನ ಮಂತ್ರಿ ಕಚೇರಿಯಿಂದ ದೂರವಾಣಿ ಕರೆ ಬಂದಿದ್ದು, ಅಧಿಕಾರಿಗಳು ಪತ್ರದಲ್ಲಿನ ಬೇಡಿಕೆಯ ಬಗ್ಗೆ ಮೂರು ನಿಮಿಷಗಳವರೆಗೆ ವಿಸ್ತೃತ ಚರ್ಚೆ ನಡೆಸಿದರು.

ಚಿತ್ರದುರ್ಗ-ತುಮಕೂರು ರೈಲು ಯೋಜನೆಯನ್ನು ಆರಂಭಿಸುವಂತೆ ಸಂತೋಷ್ ಕಳೆದ ಒಂದು ತಿಂಗಳ ಹಿಂದೆ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು. ‘ಚಿತ್ರದುರ್ಗದಿಂದ ಬೆಂಗಳೂರಿಗೆ ನೇರ ರೈಲು ಮಾರ್ಗ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಿದೆ. ಇದರಿಂದ ಸರಕು ಸಾಗಣೆ ವೆಚ್ಚ, ಇಂಧನ, ಸಮಯ ವ್ಯರ್ಥವಾಗುತ್ತಿದ್ದು, ಅಭಿವೃದ್ಧಿಗೂ ಹಿನ್ನಡೆ ಆಗಿದೆ. ಯೋಜನೆ ಜಾರಿಗೊಳಿಸುವುದಾಗಿ ಪ್ರಕಟಿಸಿ ಅನೇಕ ವರ್ಷಗಳಾದರೂ ಕಾಮಗಾರಿ ಆರಂಭವಾಗಿಲ್ಲ. ಆದ್ದರಿಂದ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಬೇಕು’ ಎಂದು ಮನವಿ ಮಾಡಿದ್ದರು. ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯದ ಅಧಿಕಾರಿಯು ಸಂತೋಷ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.

ಬಳಿಕ ‘ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ. ನಂತರ ಮತ್ತೊಮ್ಮೆ ನಿಮ್ಮನ್ನು ಸಂಪರ್ಕಿಸುತ್ತೇವೆ’ ಎಂದು ತಿಳಿಸಿದ್ದಾರೆ.‌

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !