ಧರ್ಮಪುರ: ಬೆಂಕಿ ಆಕಸ್ಮಿಕದಿಂದ ಈಚೆಗೆ ಗುಡಿಸಲು ಸುಟ್ಟು ಜತೆಗೆ ಹಸು ಸುಟ್ಟು ಹೋಗಿದ್ದ ಮುಂಗುಸುವಳ್ಳಿಯ ಗೋವಿಂದಪ್ಪ, ಚಿಕ್ಕಣ್ಣ, ಶಿವಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸೋಮವಾರ ಭೇಟಿಯಾಗಿ ಧನ ಸಹಾಯ ಮಾಡಿದರು.
ನಿವೇಶನಗಳಿಗೆ ಖಾತೆ ಮಾಡಿಸಿಕೊಂಡಲ್ಲಿ ಮನೆ ಮಂಜೂರು ಮಾಡಿಸಿ ಕೊಡಲಾಗುವುದು. ತಾಲ್ಲೂಕಿನಲ್ಲಿ ಗುಡಿಸಲು ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಹರಿಯಬ್ಬೆ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್, ಶಿವಣ್ಣ, ತಿಮ್ಮಣ್ಣ, ಶಾಮಿಯಾನ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಈರಲಿಂಗೇಗೌಡ, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ಬಜ್ಜೇರ ಗೋವಿಂದಪ್ಪ ಉಪಸ್ಥಿತರಿದ್ದರು.